ಇರಾಕ್: ಅಮೆರಿಕ ನೆಲೆಯ ಮೇಲೆ ಮತ್ತೆ ರಾಕೆಟ್ ದಾಳಿ

Update: 2021-05-05 18:53 GMT

ಬಗ್ದಾದ್ (ಇರಾಕ್), ಮೇ 5: ಅಮೆರಿಕನ್ನರು ನೆಲೆಸಿರುವ ನೆಲೆಯೊಂದರ ಮೇಲೆ ಮಂಗಳವಾರ ಎರಡು ರಾಕೆಟ್‌ಗಳನ್ನು ಉಡಾಯಿಸಲಾಗಿದೆ ಎಂದು ಇರಾಕ್ ಸೇನೆ ತಿಳಿಸಿದೆ. ಇದು ಮೂರು ದಿನಗಳಲ್ಲಿ ನಡೆದ ಮೂರನೇ ದಾಳಿಯಾಗಿದೆ. ಅಮೆರಿಕ ಸರಕಾರದ ನಿಯೋಗವೊಂದು ಇರಾಕ್‌ಗೆ ಭೇಟಿ ನೀಡುತ್ತಿರುವ ಹಂತದಲ್ಲಿ ಈ ದಾಳಿ ನಡೆಯುತ್ತಿದೆ.

ಐನ್ ಅಲ್ ಅಸಾದ್ ವಾಯುನೆಲೆಯ ಖಾಲಿ ಜಾಗವೊಂದರಲ್ಲಿ ಎರಡು ರಾಕೆಟ್‌ಗಳು ಬಿದ್ದವು ಎಂದು ಸೇನೆ ಹೇಳಿದೆ. ದಾಳಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ.

ಅಮೆರಿಕ ನೇತೃತ್ವದ ಮಿತ್ರಪಡೆಯ ಸೈನಿಕರಿರುವ, ಬಗ್ದಾದ್ ವಿಮಾನ ನಿಲ್ದಾಣದಲ್ಲಿರುವ ವಾಯು ನೆಲೆಯೊಂದರ ಮೇಲೆ ರವಿವಾರ ರಾತ್ರಿ ದಾಳಿ ನಡೆದಿತ್ತು. ಬಳಿಕ ಬಗ್ದಾದ್‌ನ ಉತ್ತರದಲ್ಲಿರುವ ಬಲಾದ್ ವಾಯುನೆಲೆಯ ಮೇಲೆ ಸೋಮವಾರ ರಾತ್ರಿ ದಾಳಿ ನಡೆದಿತ್ತು. ಅಲ್ಲಿ ಅಮೆರಿಕ ಗುತ್ತಿಗೆದಾರರು ನೆಲೆಸಿದ್ದಾರೆ.

ಈ ದಾಳಿಗಳ ಹೊಣೆಯನ್ನು ಈವರೆಗೆ ಯಾರೂ ಹೊತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News