ಹೊಸ ಮನೆ ಪಡೆಯುವ ನಿಮ್ಮ ಕುರುಡು ದುರಹಂಕಾರ ಬಿಡಿ, ಜನರ ಜೀವನ ಮುಖ್ಯ: ರಾಹುಲ್‌ ಗಾಂಧಿ

Update: 2021-05-07 07:19 GMT

ಹೊಸದಿಲ್ಲಿ: ಕೇಂದ್ರ ವಿಸ್ಟಾ ಯೋಜನೆ ಕುರಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶುಕ್ರವಾರ ಕೇಂದ್ರ ಸರ್ಕಾರದ ಮೇಲೆ ಮಾತಿನ ಪ್ರಹಾರ ನಡೆಸಿದ್ದು,  ಈ ಯೋಜನೆಯನ್ನು "ಕ್ರಿಮಿನಲ್ ವ್ಯರ್ಥ" ಎಂದು ಹೇಳಿದ್ದಾರೆ ಹಾಗೂ ಜನರ ಜೀವ ಉಳಿಸುವ ಕಡೆ ಗಮನಹರಿಸಬೇಕೆಂದು ಕೋರಿದ್ದಾರೆ.

ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ಸಿಪಿಡಬ್ಲ್ಯುಡಿ ತನ್ನ ಅಂದಾಜು ವೆಚ್ಚವನ್ನು 11,794 ಕೋಟಿಯಿಂದ 13,450 ಕೋಟಿ ರೂ.ಗಳಿಗೆ ಪರಿಷ್ಕರಿಸಿದೆ.

"ಸೆಂಟ್ರಲ್ ವಿಸ್ಟಾ ಯೋಜನೆಯು ಕ್ರಿಮಿನಲ್ ವ್ಯರ್ಥವಾಗಿದೆ. ಜನರ ಜೀವ ಉಳಿಸುವುದನ್ನು ಪ್ರಮುಖವಾಗಿ ತೆಗೆದುಕೊಳ್ಳಿ. ಹೊಸ ಮನೆ ಪಡೆಯಲು ನಿಮ್ಮ ಕುರುಡು ದುರಹಂಕಾರ ಬಿಡಿ" ಎಂದು ಅವರು ಟ್ವಿಟ್ಟರ್ ನಲ್ಲಿ ರಾಹುಲ್ ತಿಳಿಸಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಜನರ ಜೀವ ಉಳಿಸಲು ಕೇಂದ್ರ ವಿಸ್ಟಾ ಯೋಜನೆಗಳನ್ನು ಸ್ಥಗಿತಗೊಳಿಸಲು ಹಾಗೂ  ವೈದ್ಯಕೀಯ ಮೂಲಸೌಕರ್ಯಗಳನ್ನು ಸುಧಾರಿಸಲು ಆದ್ಯತೆ ನೀಡುವಂತೆ ರಾಹುಲ್ ಗಾಂಧಿ ಮತ್ತು ಅವರ ಕಾಂಗ್ರೆಸ್ ಪಕ್ಷವು ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದೆ.

ರಾಷ್ಟ್ರದ ರಾಜಧಾನಿಯಲ್ಲಿ ಲಾಕ್ ಡೌನ್ ಜಾರಿಯ  ಹೊರತಾಗಿಯೂ ವಿಸ್ಟಾ ಯೋಜನೆಯ ಕಾಮಗಾರಿ ಮುಂದುವರೆದಿದೆ.ಯೋಜನೆಯ ನಿರ್ಮಾಣ ಕಾರ್ಯಗಳನ್ನು "ಅಗತ್ಯ ಸೇವೆಗಳ" ವ್ಯಾಪ್ತಿಗೆ ತರಲಾಗಿದೆ, ಈ ಹೆಜ್ಜೆಯನ್ನು ಪ್ರತಿಪಕ್ಷಗಳು ಟೀಕಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News