ಸಿಟಿ ಸ್ಕ್ಯಾನಿಂಗ್ ದುಬಾರಿ ದರಕ್ಕೆ ಕಡಿವಾಣ: ಖಾಸಗಿ ಆಸ್ಪತ್ರೆಗಳಲ್ಲಿ ದರ ನಿಗದಿ ಮಾಡಿದ ಸರಕಾರ

Update: 2021-05-07 16:54 GMT

ಬೆಂಗಳೂರು, ಮೇ 7: ಖಾಸಗಿ ಆಸ್ಪತ್ರೆಗಳಲ್ಲಿ ಸಿ.ಟಿ.ಸ್ಕ್ಯಾನಿಂಗ್ ದರವನ್ನು ಒಂದೂವರೆ ಸಾವಿರ ರೂಪಾಯಿ(1500 ರೂ.) ಹಾಗೂ ಡಿಜಿಟಲ್ ಎಕ್ಸ್-ರೇಗೆ ಗರಿಷ್ಠ 250 ರೂ.ನಿಗದಿಗೊಳಿಸಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಆದೇಶಿಸಿದ್ದಾರೆ.

ಕೆಲ ಆಸ್ಪತ್ರೆಗಳಲ್ಲಿ ರೋಗಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಮಹತ್ವದ ಆದೇಶ ಹೊರಡಿಸಲಾಗಿದೆ. ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳಲ್ಲಿ ಸಿ.ಟಿ.ಸ್ಕ್ಯಾನಿಂಗ್‍ಗಾಗಿ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಹಣ ಪಡೆದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

ಸರಕಾರಿ ವ್ಯವಸ್ಥೆ ಅಡಿ ಸ್ಕ್ಯಾನಿಂಗ್ ಅನ್ನು ಉಚಿತವಾಗಿ ಮಾಡಲಾಗುತ್ತಿದೆ. ಸಾರ್ವಜನಿಕರು ಸರಕಾರಿ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಇತ್ತೀಚೆಗೆ ಅನೇಕ ಪ್ರಕರಣಗಳಲ್ಲಿ ಕೊರೋನ ಸೋಂಕು ದೃಢಪಡಿಸಲು ಸಿಟಿ ಸ್ಕ್ಯಾನ್ ಹಾಗೂ ಡಿಜಿಟಲ್ ಎಕ್ಸ್-ರೇ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆ/ಲ್ಯಾಬ್‍ಗಳಲ್ಲಿ ಸಿಟಿ ಸ್ಕ್ಯಾನ್‍ಗೆ ಗರಿಷ್ಠ 1,500 ಹಾಗೂ ಡಿಜಿಟಲ್ ಎಕ್ಸ್-ರೇಗೆ ಗರಿಷ್ಠ 250 ರೂ.ದರ ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News