ಕೋವಿಡ್ ನ ಎರಡು ರೂಪಾಂತರ ವೈರಸ್ ವಿರುದ್ಧ ಕೊವ್ಯಾಕ್ಸಿನ್ ಪರಿಣಾಮಕಾರಿ: ಭಾರತ್ ಬಯೋಟೆಕ್

Update: 2021-05-16 19:18 GMT

ಹೊಸದಿಲ್ಲಿ: ಭಾರತ (ಬಿ.1.617) ಹಾಗೂ ಬ್ರಿಟನ್ (ಬಿ.1.1.7)ನಲ್ಲಿ ಮೊದಲ ಬಾರಿಗೆ ಪತ್ತೆಯಾದ ರೂಪಾಂತರಗೊಂಡ ಕೊರೋನ ವೈರಸ್ಗಳ ವಿರುದ್ಧ ಕೊವ್ಯಾಕ್ಸಿನ್ ಪರಿಣಾಮಕಾರಿಯಾಗಿದೆ ಎಂದು ಕೊವ್ಯಾಕ್ಸಿನ್ ಲಸಿಕೆ ಉತ್ಪಾದಕ ಕಂಪೆನಿ ಭಾರತ್ ಬಯೋಟೆಕ್ ರವಿವಾರ ಪ್ರತಿಪಾದಿಸಿದೆ.

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹಯೋಗದಲ್ಲಿ ನಡೆಸಿದ ಅಧ್ಯಯನ ವರದಿಯಲ್ಲಿ ಇದು ದಾಖಲಾಗಿದೆ ಎಂದು ಅದು ತಿಳಿಸಿದೆ.

ಭಾರತದಲ್ಲಿ ಮೊದಲ ಬಾರಿ ಪತ್ತೆಯಾಗಿರುವ ಬಿ. 1.617 ಮಾದರಿಯನ್ನು ತಟಸ್ಥಗೊಳಿಸುವಲ್ಲಿ ಈ ಲಸಿಕೆ ಪರಿಣಾಮಕಾರಿಯಾಗಿದೆ. ಬ್ರಿಟನ್ನಲ್ಲಿ ಮೊದಲು ಬಾರಿ ಕಂಡು ಬಂದ ಬಿ. 1.1.7 ಹಾಗೂ ಲಸಿಕೆ ತಳಿ ಡಿ 6114ಜಿ ನಡುವಿನ ತಟಸ್ಥೀಕರಣದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ ಎಂದು ಭಾರತ್ ಬಯೋಟೆಕ್ ಹೇಳಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ದೇಶಾದ್ಯಂತ ಇದುವರೆಗೆ ಕೋವಿಡ್ ಲಸಿಕೆಯ ಒಟ್ಟು 18,22,20,164 ಡೋಸ್ಗಳನ್ನು ನೀಡಲಾಗಿದೆ ಎಂದು ಹೇಳಿದೆ. ಪ್ರಸ್ತುತ ದೇಶದಲ್ಲಿ ಲಭ್ಯವಿರುವ ಮೂರು ಕೋವಿಡ್ ಲಸಿಕೆಗಳಲ್ಲಿ ಕೊವ್ಯಾಕ್ಸಿನ್ ಕೂಡ ಒಂದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News