ವೈದ್ಯನ ಮೇಲೆ ಹಲ್ಲೆ ಆರೋಪ: ಇನ್‍ಸ್ಪೆಕ್ಟರ್ ಸೇರಿ ಮೂವರು ಅಮಾನತು

Update: 2021-05-19 15:33 GMT

ಬೆಂಗಳೂರು, ಮೇ 19: ಕೋವಿಡ್ ಸಂಬಂಧ ರೆಮ್‍ಡೆಸಿವಿರ್ ಅಕ್ರಮ ಮಾರಾಟ ವೈದ್ಯನನ್ನು ಠಾಣೆಗೆ ಕರೆತಂದು ಹಲ್ಲೆ ನಡೆಸಿದ ಆರೋಪದಡಿ ಇನ್‍ಸ್ಪೆಕ್ಟರ್ ಕಾತ್ಯಾಯಿನಿ ಆಳ್ವ ಸೇರಿ ಮೂವರನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ.

ಸಂಜಯನಗರ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ಕಾತ್ಯಾಯಿನಿ ಆಳ್ವ, ಮುಖ್ಯಪೇದೆ ಮಂಜುನಾಥ್ ಮತ್ತು ಪಾಂಡುರಂಗ ಅಮಾನತಿಗೆ ಒಳಗಾದವರು ಎಂದು ಆದೇಶದಲ್ಲಿ ಹೇಳಲಾಗಿದೆ.

ವೈದ್ಯ ನಾಗರಾಜು ಮೇಲಿನ ಹಲ್ಲೆ ಆರೋಪ ಸಂಬಂಧ ಜೆ.ಪಿ. ನಗರ ಉಪ ವಿಭಾಗದ ಎಸಿಪಿ ರಿನಾ ಸುವರ್ಣ ಅವರು ಡಿಸಿಪಿ ಮತ್ತು ಹಿರಿಯ ಅಧಿಕಾರಿಗಳಿಗೆ ನೀಡಿದ ವರದಿ ಆಧಾರದ ಮೇಲೆ ಮೂವರನ್ನು ಅಮಾನತು ಮಾಡಿ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ.

ಇನ್ನು, ಪ್ರಕರಣ ಸಂಬಂಧ ರಾಜ್ಯ ಮಾನವ ಹಕ್ಕು ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ಮುಂದಾಗಿದ್ದು, ಪೊಲೀಸ್ ಇಲಾಖೆಯ ವರದಿ ಕೇಳಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News