ಕೋವಿಡ್ 2ನೇ ಅಲೆಗೆ ದೇವಿಯ ಕ್ರೋಧ ಕಾರಣ ಎಂದು ಸಂಪ್ರೀತಗೊಳಿಸಲು ದೇವಸ್ಥಾನಕ್ಕೆ ಧಾವಿಸಿದ ನೂರಾರು ಮಂದಿ

Update: 2021-05-24 12:49 GMT

ಹೈದರಾಬಾದ್: ದೇವಿಯ ಕೋಪದಿಂದಾಗಿ ಕೋವಿಡ್ ಎರಡನೇ ಉಂಟಾಗಿದೆ ಎಂದು ನಂಬಿ ಆಕೆಯನ್ನು ಸಂಪ್ರೀತಗೊಳಿಸಲು  ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಮಮಿದದ ಗ್ರಾಮದ ಗೋಗುಲಮ್ಮ ತಳ್ಳಿ ದೇವಸ್ಥಾನದಲ್ಲಿ ರವಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ನೂರಾರು ಮಂದಿ ಎಲ್ಲಾ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಭಾಗವಹಿಸಿದ್ದಾರೆ.

ಕೋವಿಡ್ ಎರಡನೇ ಅಲೆಯಲ್ಲಿ ಹಲವರು ಪ್ರಾಣಕಳೆದುಕೊಂಡಿರುವುದರಿಂದ ದೇವಿ ಅಸಂತುಷ್ಟಳಾಗಿರುವುದೇ ಇದಕ್ಕೆ ಕಾರಣವೆಂದು ಇಲ್ಲಿನ ಗ್ರಾಮಸ್ಥರು ಬಲವಾಗಿ ನಂಬಿದ್ದಾರೆ. ಘಟನೆಯ ವೈರಲ್ ವೀಡಿಯೋದಲ್ಲಿ ನೂರಾರು ಜನರು ಭಾಗವಹಿಸಿರುವುದು ಕಾಣಿಸುತ್ತದೆಯಲ್ಲದೆ ಕೆಲವರು ಮಾಸ್ಕ್ ಕೂಡ ಧರಿಸಿರಲಿಲ್ಲ.

ಈ ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ ಜನರನ್ನು ಚದುರಿಸಿದ್ದಾರೆ. ಕಾರ್ಯಕ್ರಮದ ಆಯೋಜಕರನ್ನು  ಪೊಲೀಸರು ವಶಪಡಿಸಿಕೊಂಡು ಅವರ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್ ಹಾಗೂ ವಿಪತ್ತು ನಿರ್ವಹಣಾ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News