ಮ್ಯಾನ್ಮಾರ್: ಅಮೆರಿಕದ ಪತ್ರಕರ್ತನ ಬಂಧನ

Update: 2021-05-25 16:19 GMT

ಯಾಂಗನ್ (ಮ್ಯಾನ್ಮಾರ್), ಮೇ 25: ಮ್ಯಾನ್ಮಾರ್ನ ಸುದ್ದಿ ಮಾಧ್ಯಮ ಸಂಸ್ಥೆಯೊಂದರ ಅಮೆರಿಕನ್ ಸಂಪಾದಕರೊಬ್ಬರನ್ನು ಸೋಮವಾರ ಯಾಂಗನ್ನಲ್ಲಿ ಪೊಲೀಸರು ಬಂಧಿಸಿದ್ದಾರೆ. ದೇಶದಿಂದ ಹೊರಹೋಗುವುದಕ್ಕಾಗಿ ವಿಮಾನವೊಂದನ್ನು ಏರಲು ಯತ್ನಿಸುತ್ತಿದ್ದಾಗ ಅವರನ್ನು ತಡೆಯಲಾಗಿದೆ.

ಫ್ರಂಟಿಯರ್ ಮ್ಯಾನ್ಮಾರ್ ಪತ್ರಿಕೆಯ ಆಡಳಿತ ಸಂಪಾದಕರಾಗಿರುವ ಅಮೆರಿಕ ಪ್ರಜೆ ಡ್ಯಾನಿ ಫೆನ್ಸ್ಟರ್ರನ್ನು ಯಾಂಗನ್ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಟ್ವಿಟರ್ನಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ಪತ್ರಿಕೆಯ ಮಾಲೀಕರು ತಿಳಿಸಿದ್ದಾರೆ.
37 ವರ್ಷದ ಫೆನ್ಸ್ಟರ್ ಮಾಧ್ಯಮದಲ್ಲಿ ಸುಮಾರು ಒಂದು ವರ್ಷ ಕೆಲಸ ಮಾಡಿದ್ದಾರೆ. ತನ್ನ ಕುಟುಂಬ ಸದಸ್ಯರನ್ನು ನೋಡಲು ಅಮೆರಿಕಕ್ಕೆ ಹೋಗುವುದರಲ್ಲಿದ್ದಾಗ ಅವರನ್ನು ಬಂಧಿಸಲಾಗಿದೆ. ಅವರನ್ನು ಯಾಕೆ ಬಂಧಿಸಲಾಗಿದೆ ಎನ್ನುವುದು ನಮಗೆ ಗೊತ್ತಿಲ್ಲ ಹಾಗೂ ಬಂಧನದ ಬಳಿಕ ಅವರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಫೆಬ್ರವರಿ 1ರ ಕ್ಷಿಪ್ರಕ್ರಾಂತಿಯಲ್ಲಿ ಸೇನೆಯು ಮ್ಯಾನ್ಮಾರ್ನ ಆಡಳಿತವನ್ನು ವಹಿಸಿಕೊಂಡ ಬಳಿಕ, ಪ್ರತಿಭಟನೆಗಳಲ್ಲಿ ಭಾಗವಹಿಸಿದ 800ಕ್ಕೂ ಅಧಿಕ ಮಂದಿಯನ್ನು ಸೈನಿಕರು ಕೊಂದಿದ್ದಾರೆ‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News