ಪ.ಬಂಗಾಳ: ನಾಳೆ ಇಬ್ಬರು ಸಚಿವರು ಹಾಗೂ 12 ಶಾಸಕರ ಪ್ರಮಾಣವಚನ

Update: 2021-05-27 17:55 GMT

ಕೋಲ್ಕತಾ, ಮೇ 27: ಇಬ್ಬರು ಸಚಿವರು ಹಾಗೂ 12 ಶಾಸಕರು ಶುಕ್ರವಾರ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ರಾಜ್ಯ ಸರಕಾರ ಗುರುವಾರ ಹೇಳಿದೆ. ಸಚಿವರಾದ ಬೃತ್ಯಾ ಬಸು ಮತ್ತು ರಥಿನ್ ಘೋಷ್ರಿಗೆ ಕೊರೋನ ಸೋಂಕು ದೃಢಪಟ್ಟಿದ್ದರಿಂದ ಮೇ 10ರಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. 

ಶುಕ್ರವಾರ ವಿಧಾನಸಭೆಯ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಸು ನೂತನ ಸರಕಾರದಲ್ಲಿ ಶಿಕ್ಷಣ ಸಚಿವರಾಗಿದ್ದರೆ ಘೋಷ್ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದಾರೆ. ಕೊರೋನ ಸೋಂಕಿನಿಂದ ಚೇತರಿಸಿಕೊಂಡಿರುವ ಟಿಎಂಸಿ ಶಾಸಕರಾದ ಇದ್ರಿಸ್ ಆಲಿ ಮತ್ತು ಸಾವಿತ್ರಿ ಮಿತ್ರ ಕೂಡಾ ಶುಕ್ರವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಸಹೀನಾ ಮುಮ್ತಾರ್ ಖಾನ್, ಮೃತ್ಯುಂಜಯ್ ಮುರ್ಮು, ಸ್ವಾತಿ ಖಾಂಡ್ಕರ್, ಪ್ರದೀಪ್ ವರ್ಮ, ಬಿಜೆಪಿ ಶಾಸಕರಾದ ಅರೂಪ್ ಕುಮಾರ್ ದಾಸ್, ಶ್ರೀರೂಪ ಮಿತ್ರ ಚೌಧರಿ, ಸತ್ಯೇಂದ್ರ ನಾಥ್ ರಾಯ್ ಮತ್ತು ತನ್ಮಯ್ ಘೋಷ್ ಕೂಡಾ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಸರಕಾರದ ಮೂಲಗಳು ಹೇಳಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News