ದಿಲ್ಲಿಯಲ್ಲಿ ಮೇ 31ರಿಂದ ಲಾಕ್ ಡೌನ್ ತೆಗೆಯುವ ಪ್ರಕ್ರಿಯೆ ಆರಂಭ: ಅರವಿಂದ ಕೇಜ್ರಿವಾಲ್

Update: 2021-05-28 10:25 GMT

ಹೊಸದಿಲ್ಲಿ: ಕೋವಿಡ್-19 ರ ಎರಡನೇ ಅಲೆಯ ವಿರುದ್ಧ ದಿಲ್ಲಿ ಹಿಡಿತ ಸಾಧಿಸಿದೆ. ನಿರ್ಮಾಣ ಕಾರ್ಯಗಳನ್ನು ಪುನರಾರಂಭಿಸಿ, ಕಾರ್ಖಾನೆಗಳನ್ನು ಸೋಮವಾರದಿಂದ ಮತ್ತೆ ಒಂದು ವಾರ ತೆರೆಯುವ ಮೂಲಕ ಕ್ರಮೇಣ ಲಾಕ್‌ಡೌನ್ ಅನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಸರಕಾರ ಆರಂಭಿಸಲಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.

ಮಾರಣಾಂತಿಕ ಕಾಯಿಲೆಯ ವಿರುದ್ಧದ ನಮ್ಮ  ಹೋರಾಟವು ಕೊನೆಗೊಂಡಿದೆ ಎಂದು ಇದರ ಅರ್ಥವಲ್ಲ ಎಂದು ಕೇಜ್ರಿವಾಲ್  ಒತ್ತಿ ಹೇಳಿದರು.

"ಅನ್ ಲಾಕ್ ಪ್ರಕ್ರಿಯೆಯನ್ನು ಪ್ರಾರಂಭಿಸುವ ಸಮಯ ಇದು. ಜನರು ಕೊರೋನವೈರಸ್ ನಿಂದ  ತಪ್ಪಿಸಿಕೊಳ್ಳುತ್ತಾರೆ . ಆದರೆ ಹಸಿವಿನಿಂದ ಸಾಯುತ್ತಾರೆ ... ಕೊರೋನವೈರಸ್ ಹರಡುವುದನ್ನು ನಿಯಂತ್ರಿಸುವುದು ಹಾಗೂ  ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡುವುದರ ನಡುವೆ ನಾವು ಸಮತೋಲನವನ್ನು ಕಾಯ್ದುಕೊಳ್ಳಬೇಕು" ಎಂದು ಕೇಜ್ರಿವಾಲ್ ಆನ್‌ಲೈನ್‌ ಸುದ್ದಿಗೋಷ್ಟಿಯಲ್ಲಿ ಹೇಳಿದರು.

ಈ ಪ್ರಕ್ರಿಯೆಯಲ್ಲಿ, ನಾವು ಮೊದಲು ಅತ್ಯಂತ ಕಡಿಮೆ ಶ್ರೇಣಿಯನ್ನು ನೋಡಿಕೊಳ್ಳಬೇಕು ... ದಿನಗೂಲಿ ಕಾರ್ಮಿಕರು, ಕಾರ್ಮಿಕರು, ವಲಸೆ ಕಾರ್ಮಿಕರು ಜೀವನೋಪಾಯಕ್ಕಾಗಿ ದೂರದ ಪ್ರದೇಶಗಳಿಂದ ದಿಲ್ಲಿಗೆ ಬರುತ್ತಾರೆ, "ಎಂದು ಅವರು ಹೇಳಿದರು.

"ಇದನ್ನು ಗಮನದಲ್ಲಿಟ್ಟುಕೊಂಡು, ಕಾರ್ಖಾನೆಗಳನ್ನು ತೆರೆಯಲು ಹಾಗೂ  ಸೋಮವಾರದಿಂದ ಒಂದು ವಾರದವರೆಗೆ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ತಜ್ಞರು ಹಾಗೂ ಸಾರ್ವಜನಿಕರ ಅಭಿಪ್ರಾಯದ ಆಧಾರದ ಮೇಲೆ ಸರಕಾರವು ಪ್ರತಿ ವಾರ ಅನ್ ಲಾಕ್ ಪ್ರಕ್ರಿಯೆಯನ್ನು ಮುಂದುವರಿಸುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News