ಮಾಯಾವತಿ ಕುರಿತು ಅವಹೇಳನಕಾರಿ ಹೇಳಿಕೆ: ವಿಶ್ವಸಂಸ್ಥೆಯ ಪರಿಸರ ರಾಯಭಾರಿ ಸ್ಥಾನದಿಂದ ರಣದೀಪ್‌ ಹೂಡಾ ವಜಾ

Update: 2021-05-29 06:15 GMT

ಮುಂಬೈ: ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಬಾಲಿವುಡ್‌ ನಟ ರಣದೀಪ್‌ ಹೂಡಾರ ಕುರಿತು ಸಾಮಾಜಿಕ ತಾಣದಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ವಿವಾದ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ವಿಶ್ವಸಂಸ್ಥೆಯ ಪರಿಸರ ಒಪ್ಪಂದದ ವಲಸೆ ಪ್ರಭೇದಗಳ ಸಂರಕ್ಷಣೆ (ಸಿಎಮ್ಎಸ್)ಯ ರಾಯಭಾರಿ ಸ್ಥಾನದಿಂದ ಅವರನ್ನು ವಜಾಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತಾದಂತೆ ʼಅರೆಸ್ಟ್‌ ರಣದೀಪ್‌ ಹೂಡಾʼ ಟ್ವಿಟರ್‌ ನಲ್ಲಿ ಟ್ರೆಂಡಿಂಗ್‌ ಆಗಿದೆ.

ರಣದೀಪ್‌ ಹೂಡಾ ಮಾತನಾಡಿದ್ದ 9 ವರ್ಷದ ಹಿಂದಿನ ವೀಡಿಯೋವೊಂದು ಸಾಮಾಜಿಕ ತಾಣದಲ್ಲಿ ವೈರಲ್‌ ಆಗಲು ಪ್ರಾರಂಭಿಸಿದಂದಿನಿಂದ ವಿವಾದ ಸೃಷ್ಟಿಯಾಗಿತ್ತು. ಇದು ಜಾತಿ ಮತ್ತು ಲಿಂಗ ಭೇದಭಾವಗಳನ್ನು ಸೂಚಿಸುತ್ತಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಸಂಸ್ಥೆಯೊಂದು 2012ರಲ್ಲಿ ನಡೆಸಿದ್ದ ಕಾರ್ಯಕ್ರಮವೊಂದರಲ್ಲಿ ರಣದೀಪ್‌ ಹೂಡಾ ಮಾತನಾಡಿದ್ದ 43 ಸೆಸೆಕೆಂಡ್‌ ಗಳ ವೀಡಿಯೋ ವೈರಲ್‌ ಆಗಿದೆ. 

ತನ್ನ ವೆಬ್‌ಸೈಟ್‌ನಲ್ಲಿ ಸಿಎಂಎಸ್ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ, ವೀಡಿಯೊದಲ್ಲಿನ ಕಾಮೆಂಟ್‌ಗಳನ್ನು "ಅವಹೇಳನಕಾರಿ" ಎಂದು ಸಂಸ್ಥೆ ಕಂಡುಕೊಂಡಿದೆ ಮತ್ತು ರಣದೀಪ್ ಹೂಡಾ ಇನ್ನು ಮುಂದೆ ತಮ್ಮ ಸಂಸ್ಥೆಗೆ ರಾಯಭಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಅವರು ನೀಡಿರುವ ಈ ಹೇಳಿಕೆಗಳು ಸಿಎಂಎಸ್‌ ನ ಅಥವಾ ವಿಶ್ವಸಂಸ್ಥೆಯ ಮೌಲ್ಯಗಳನ್ನು ಪ್ರತಿನಿಧಿಸುವುದಿಲ್ಲ" ಎಂದು ಹೇಳಿಕೆ ನೀಡಿದೆ. ರಣದೀಪ್‌ ಹೂಡಾ ಮೂರು ವರ್ಷಗಳ ಅವಧಿಗೆ 2020 ಫೆಬ್ರವರಿಯಲ್ಲಿ ರಾಯಭಾರಿಯಾಗಿ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News