ಕಾಂಗ್ರೆಸ್ ಬೆಡ್ ಬ್ಲಾಕಿಂಗ್ ಹಗರಣದ ತನಿಖೆಯ ದಾರಿ ತಪ್ಪಿಸುತ್ತಿದೆ: ತೇಜಸ್ವಿ ಸೂರ್ಯ ಆರೋಪ

Update: 2021-05-29 11:25 GMT

ಬೆಂಗಳೂರು, ಮೇ 29: ಬೆಡ್ ಬ್ಲಾಕಿಂಗ್ ಹಗರಣ ಕೇವಲ ಬೊಮ್ಮನಹಳ್ಳಿಯಲ್ಲಿ ಮಾತ್ರ ನಡೆದಿಲ್ಲ. ಬೆಂಗಳೂರಿನಾದ್ಯಂತ ನಡೆದಿದೆ. ಆದರೆ, ಕಾಂಗ್ರೆಸ್ ತನಿಖೆಯನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

ಶನಿವಾರ ಬೊಮ್ಮನಹಳ್ಳಿಯ ಆರ್.ಎಂ.ಆರ್.ಪಾರ್ಕ್ ನಲ್ಲಿ ಕೋವಿಡ್ ಕೇರ್ ಸೆಂಟರ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್‍ನವರ ಜತೆ ಇರುವ ಒಂದೆರಡು ಬುದ್ಧಿಜೀವಿಗಳು ಪ್ರಕರಣದ ತನಿಖೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ನಾನು ಮತ್ತು ಶಾಸಕ ಸತೀಶ್ ರೆಡ್ಡಿ ಈ ವಿಷಯವನ್ನು ಇಷ್ಟಕ್ಕೆ ಬಿಡುವುದಿಲ್ಲ. ಸತ್ಯ ಆದಷ್ಟು ಬೇಗ ಹೊರಬರಲಿದೆ ಎಂದು ತಿಳಿಸಿದ್ದಾರೆ.

ಬೆಡ್ ಬ್ಲಾಕಿಂಗ್ ಹಗರಣದ ಹತ್ತು ದಿನದ ಡಾಟಾ ಮಾತ್ರ ತೆಗೆದುಕೊಂಡಿದ್ದೇವೆ. ಸಿಸಿಬಿ ಎಲ್ಲ ಮಾಹಿತಿಯನ್ನು ಸಂಗ್ರಹಿಸಿ ತನಿಖೆ ನಡೆಸುತ್ತಿದೆ. ಇದು ಕೇವಲ ಬೊಮ್ಮನಹಳ್ಳಿ ಭಾಗದಲ್ಲಿ ಮಾತ್ರ ನಡೆದಿಲ್ಲ. ಈ ಹಗರಣ ಇಡೀ ಬೆಂಗಳೂರು ವ್ಯಾಪ್ತಿಯಲ್ಲಿ ನಡೆದಿದೆ. ಈ ಹಗರಣದ ಹಿಂದೆ ನೂರಾರು ಜನ ಇದ್ದಾರೆ. ಹಗರಣ ಹೊರತಂದವರನ್ನೇ ತೇಜೋವಧೆ ಮಾಡುವ ಕೆಲಸ ಆಗುತ್ತಿದೆ. ಸಾವಿರಾರು ಬೆಡ್ ಬ್ಲಾಕ್ ದಂಧೆ ನಡೆದಿದೆ. ನೂರಾರು ಜನರ ಮೇಲೆ ಎಫ್‍ಐಆರ್ ಆಗಲಿದೆ. ಆದರೆ, ಇಡೀ ಪ್ರಕರಣದ ದಿಕ್ಕು ತಪ್ಪಿಸುವ ಕೆಲಸ ಆಗುತ್ತಿದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News