3-17 ವರ್ಷದ ಮಕ್ಕಳಲ್ಲಿ ಕೊರೊನ ಲಸಿಕೆಯ ತುರ್ತು ಬಳಕೆಗೆ ಚೀನಾ ಅನುಮೋದನೆ

Update: 2021-06-06 17:41 GMT

ಬೀಜಿಂಗ್ (ಚೀನಾ), ಜೂ. 6: ಮೂರರಿಂದ 17 ವರ್ಷಗಳ ನಡುವಿನ ಪ್ರಾಯದ ಮಕ್ಕಳಲ್ಲಿ ‘ಕೊರೋನವ್ಯಾಕ್’ ಎಂಬ ಕೊರೋನ ವೈರಸ್ ಲಸಿಕೆಯ ತುರ್ತು ಬಳಕೆಗೆ ಚೀನಾ ಅನುಮೋದನೆ ನೀಡಿದೆ ಎಂದು ಲಸಿಕೆಯನ್ನು ತಯಾರಿಸುವ ಚೀನಾದ ಕಂಪೆನಿ ಸಿನೊವ್ಯಾಕ್ನ ಅಧ್ಯಕ್ಷ ಯಿನ್ ವೀಡೊಂಗ್ ಹೇಳಿದ್ದಾರೆ.

‘‘ಆದರೆ, ಈ ಗುಂಪಿನಲ್ಲಿ ಯಾವ ವಯಸ್ಸಿನವರಿಗೆ ಮೊದಲು ಲಸಿಕೆ ನೀಡಬೇಕು ಎನ್ನುವುದನ್ನು ಲಸಿಕೆಯ ತುರ್ತು ಬಳಕೆಯನ್ನು ಆರಂಭಿಸುವಾಗ ನಿರ್ಧರಿಸಲಾಗುವುದು’’ ಎಂದು ಅವರು ಹೇಳಿರುವುದಾಗಿ ಚೀನಾದ ಸರಕಾರಿ ಒಡೆತನದ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ರವಿವಾರ ಹೇಳಿದೆ.

ಈ ಲಸಿಕೆಯ ಮೊದಲ ಮತ್ತು ಎರಡನೇ ಹಂತಗಳ ವೈದ್ಯಕೀಯ ಪ್ರಯೋಗವನ್ನು ಸಿನೋವ್ಯಾಕ್ ಕಂಪೆನಿ ಈಗಾಗಲೇ ಮುಗಿಸಿದೆ. ಈ ಪ್ರಯೋಗಗಳಲ್ಲಿ ಈ ವಯಸ್ಸಿನ ನೂರಾರು ಸ್ವಯಂಸೇವಕರು ಭಾಗವಹಿಸಿದ್ದಾರೆ. ಲಸಿಕೆಯು ಸುರಕ್ಷಿತ ಹಾಗೂ ಪರಿಣಾಮಕಾರಿ ಎನ್ನುವುದು ಈ ಪ್ರಯೋಗಗಳಲ್ಲಿ ಸಾಬೀತಾಗಿದೆ ಎಂದು ಶುಕ್ರವಾರ ಸಿಸಿಟಿವಿಗೆ ನೀಡಿದ ಸಂದರ್ಶನದಲ್ಲಿ ಯಿನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News