ಅಮೆರಿಕದ ಸೇನಾನೆಲೆಯ ಮೇಲೆ ಹಾರುತ್ತಿದ್ದ 2 ಡ್ರೋನ್ ಗಳನ್ನು ಹೊಡೆದುರುಳಿಸಿದ ಇರಾಕ್ ಸೇನೆ

Update: 2021-06-06 18:08 GMT

ಬಗ್ದಾದ್ (ಇರಾಕ್), ಜೂ. 6: ಅಮೆರಿಕದ ಸೈನಿಕರು ಇರುವ ಸೇನಾ ನೆಲೆಯೊಂದರ ಮೇಲಿನ ಆಕಾಶದಲ್ಲಿ ಎರಡು ಡ್ರೋನ್ಗಳನ್ನು ನಾಶಪಡಿಸಲಾಗಿದೆ ಎಂದು ಇರಾಕ್ ಸೇನೆ ರವಿವಾರ ತಿಳಿಸಿದೆ. ಇದೇ ನೆಲೆಯ ಮೇಲೆ ಒಂದು ತಿಂಗಳ ಹಿಂದೆಯೂ ಡ್ರೋನ್ ದಾಳಿ ನಡೆಸಲಾಗಿತ್ತು.

ಇರಾಕ್ ನ ಪಶ್ಚಿಮದ ಮರುಭೂಮಿಯಲ್ಲಿರುವ ಐನ್ ಅಲ್-ಅಸಾದ್ ನೆಲೆಯ ಮೇಲಿನ ಆಕಾಶದಲ್ಲಿ ಅಮೆರಿಕ ಸೇನೆಯ ಸಿ-ಆರ್ಎಎಮ್ ಕ್ಷಿಪಣಿ ನಾಶಕ ವ್ಯವಸ್ಥೆಯನ್ನು ಜಾಗೃತಗೊಳಿಸಿ ಡ್ರೋನ್ಗಳನ್ನು ಹೊಡೆದುರುಳಿಸಲಾಯಿತು ಎಂದು ಇರಾಕ್ ಸೇನೆ ಹೇಳಿತು.

ಇದಕ್ಕಿಂತ ಕೆಲವು ಗಂಟೆಗಳ ಮೊದಲು ಬಗ್ದಾದ್ ವಿಮಾನ ನಿಲ್ದಾಣದ ಮೇಲಿನ ಆಕಾಶದಲ್ಲಿ ರಾಕೆಟೊಂದನ್ನು ಹೊಡೆದುರುಳಿಸಲಾಗಿತ್ತು ಎಂದು ಇರಾಕ್ನಲ್ಲಿರುವ ಅಮೆರಿಕ ನೇತೃತ್ವದ ಸೇನಾ ಮೈತ್ರಿಕೂಟದ ವಕ್ತಾರ ಕರ್ನಲ್ ವೇನ್ ಮ್ಯಾರೊಟೊ ತಿಳಿಸಿದರು. ಈ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಹಾಗೂ ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ.
ಐಸಿಸ್ ವಿರುದ್ಧದ ಹೋರಾಟದಲ್ಲಿ ಇರಾಕ್ ಸೇನೆಗೆ ನೆರವು ನೀಡುವುದಕ್ಕಾಗಿ ಆ ದೇಶಕ್ಕೆ ಅಮೆರಿಕದ ಸೈನಿಕರನ್ನು ಕಳುಹಿಸಲಾಗಿತ್ತು. ಈ ಹೋರಾಟದಲ್ಲಿ ತಾನು ಜಯ ಗಳಿಸಿರುವುದಾಗಿ 2017ರ ಕೊನೆಯಲ್ಲಿ ಇರಾಕ್ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News