ಬೆಂಗಳೂರು ವಿಮಾನ ನಿಲ್ದಾಣ ಬಳಿ ಸ್ಫೋಟ : ಆರು ಮಂದಿಗೆ ಗಾಯ

Update: 2021-06-07 03:34 GMT

ಬೆಂಗಳೂರು : ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ರಸ್ತೆ ಕಾಮಗಾರಿ ಸ್ಥಳದಲ್ಲಿ ಸ್ಫೋಟ ಸಂಭವಿಸಿದ್ದು, ಆರು ಮಂದಿ ಕೆಲಸಗಾರರು ಗಾಯಗೊಂಡಿದ್ದಾರೆ.

‘ಅವಿನಾಶ್, ಸಿರಾಜ್, ಪ್ರಶಾಂತ್, ಗೌತಮ್, ಅಜಯ್‌ ಕುಮಾರ್ ಹಾಗೂ ನಾಗೇಶ್ ರಾವ್ ಗಾಯಗೊಂಡವರು ಎಂದು ಪೊಲೀಸ್ ಮೂಲಗಳು ಹೇಳಿವೆ.

‘ನಿಲ್ದಾಣದ ವಿಸ್ತರಣೆ ಹಾಗೂ ಎರಡನೇ ಟರ್ಮಿನಲ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ನಿಲ್ದಾಣ ವ್ಯಾಪ್ತಿಯ ಜಾಗದಲ್ಲಿ ಹೊಸ ರಸ್ತೆ ನಿರ್ಮಿಸಲಾಗುತ್ತಿದೆ. ಟರ್ಮಿನಲ್ ಹಾಗೂ ರಸ್ತೆಗೆ ಸಂಚಾರ ಸಂಕೇತಗಳ ಬಿಳಿ ಬಣ್ಣದ ಪಟ್ಟಿಗಳನ್ನು ಹಾಕುವ ಕೆಲಸ ಕೆಲ ದಿಗಳಿಂದ ನಡೆಯತ್ತಿತ್ತು.

‘ರವಿವಾರ ಕೆಲಸಕ್ಕೆ ಹಾಜರಾಗಿದ್ದ ಕೆಲಸಗಾರರು, ಕೆಳ ಸೇತುವೆಯಲ್ಲಿ ಸೇರಿದ್ದರು. ರಸ್ತೆಗೆ ಬಳಿಯಬೇಕಾದ ಬಣ್ಣವನ್ನು ರಾಸಾಯನಿಕದ ಜೊತೆ ಮಿಶ್ರಣ ಮಾಡಿ ಸಿಲಿಂಡರ್ ಬಳಸಿ ಕಾಯಿಸುತ್ತಿದ್ದರು. ಈ ಸಂದರ್ಭ ಏಕಾಏಕಿ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿತ್ತು. ಕೆಲ ಕ್ಷಣಗಳಲ್ಲೇ ಬೆಂಕಿ ಕೆನ್ನಾಲಗೆ ಇಡೀ ಕೆಳ ಸೇತುವೆ ಆವರಿಸಿತ್ತು’ ಎಂದು ಮೂಲಗಳು ಹೇಳಿವೆ. ನಿಲ್ದಾಣದ ಅಗ್ನಿಶಾಮಕ ಸಿಬ್ಬಂದಿ, ಎರಡೂವರೆ ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News