ಪಾಕಿಸ್ತಾನ: ರೈಲುಗಳ ಡಿಕ್ಕಿ; ಕನಿಷ್ಠ 40 ಸಾವು

Update: 2021-06-07 15:55 GMT

ಇಸ್ಲಾಮಾಬಾದ್ (ಪಾಕಿಸ್ತಾನ), ಜೂ. 7: ದಕ್ಷಿಣ ಪಾಕಿಸ್ತಾನದ ದರ್ಕಿ ಪಟ್ಟಣದಲ್ಲಿ ಸೋಮವಾರ ಬೆಳಗ್ಗೆ ಎರಡು ರೈಲುಗಳು ಡಿಕ್ಕಿಯಾಗಿದ್ದು ಕನಿಷ್ಠ 40 ಮಂದಿ ಮೃತಪಟ್ಟಿದ್ದಾರೆ. ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ.

ಡಿಕ್ಕಿಯ ತೀವ್ರತೆಗೆ ಬೋಗಿಗಳು ತೀವ್ರವಾಗಿ ನುಜ್ಜುಗುಜ್ಜಾಗಿದ್ದು, ಹಳಿಯ ಎರಡೂ ಕಡೆಗೆ ಎಸೆಯಲ್ಪಟ್ಟಿವೆ. ರಕ್ಷಣಾ ಕಾರ್ಯಾಚರಣೆ ಸಾಗಿದ್ದು, ಕ್ರೇನ್ ಮತ್ತು ಇತರ ಯಂತ್ರಗಳನ್ನು ನಿಯೋಜಿಸಲಾಗಿದೆ.

ಮೊದಲು ಉತ್ತರಕ್ಕೆ ಸಾಗುವ ಮಿಲ್ಲತ್ ಎಕ್ಸ್ಪ್ರೆಸ್ ರೈಲಿನ 8 ಬೋಗಿಗಳು ದರ್ಕಿ ಸಮೀಪ ಹಳಿತಪ್ಪಿದವು ಎಂದು ಸ್ಥಳೀಯ ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ. ಬಳಿಕ ದಕ್ಷಿಣದತ್ತ ಹೋಗುತ್ತಿದ್ದ ಸರ್ ಸೈಯದ್ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿದ ಬೋಗಿಗಳಿಗೆ ಡಿಕ್ಕಿಯಾಯಿತು.

ರೈಲು ಅಪಘಾತದಿಂದ ‘ಆಘಾತ’ವಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News