ಮಾದಕ ವಸ್ತು ಸರಬರಾಜು ವಿರುದ್ಧ ಕಾರ್ಯಾಚರಣೆ: ಐವರ ಬಂಧನ, 30 ಲಕ್ಷ ರೂ. ಮಾದಕ ವಸ್ತು ಜಪ್ತಿ

Update: 2021-06-10 11:23 GMT

ಬೆಂಗಳೂರು, ಜೂ.10: ಮಾದಕ ವಸ್ತು ಸರಬಾರಾಜು ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಸಿಸಿಬಿ ಪೆÇಲೀಸರು, ಐವರನ್ನು ಬಂಧಿಸಿ 30 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ನಗರದ ಬಯ್ಯಾನ್ ಅನ್ಸಾರಿ(26), ಅರ್ನಾಲ್ಡ್ ಪಾಸ್ಕಲ್ ಡಿಸೋಜಾ(27), ವೆಂಕಟಾಚಲಂ(23), ಕಾನಿಷ್ಕ್ ರೆಡ್ಡಿ(23) ಹಾಗೂ ಸಂತೋಷ್ (28) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಬೆನ್ನತ್ತಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಹಣ ಹೂಡಿಕೆ ಮಾಡಿಕೊಂಡು ಡಾರ್ಕ್‍ವೆಬ್‍ನಿಂದ ಮಾಹಿತಿಯನ್ನು ಪಡೆದುಕೊಂಡು ಆ್ಯಪ್‍ನಲ್ಲಿ ಬಿಟ್ ಕಾಯಿನ್ ಮೂಲಕ ಕಡಿಮೆ ಹಣ ಪಾವತಿಸಿ ಕೊರಿಯರ್ ನಲ್ಲಿ ಎಂಡಿಎಎ ಎಕ್ಸ್ಟೆಸಿ ಮಾತ್ರೆಗಳು, ಗಾಂಜಾ ಎಲ್‍ಎಸ್‍ಡಿ ಸ್ಟ್ರಿಪ್‍ಗಳನ್ನು ತರಿಸಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಗಳ ಜೊತೆಗೆ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಇನ್ನೂ 6 ಮಂದಿ ಸೇರಿ ಒಟ್ಟು 11 ಮಂದಿಯನ್ನು ಬಂಧಿಸಲಾಗಿದ್ದು, ಇವರಿಂದ 30 ಲಕ್ಷ ಮೌಲ್ಯದ ಎಂಡಿಎಎ ಎಕ್ಸ್ಟೆಸಿ ಮಾತ್ರೆಗಳು, ಎಲ್‍ಎಸ್‍ಡಿ ಸ್ಟ್ರಿಪ್‍ಗಳು ಮತ್ತು ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News