ಸದ್ಯದಲ್ಲಿಯೇ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆಯುವುದಾಗಿ ಹೇಳಿದ ಪತಂಜಲಿ ರಾಮ್ ದೇವ್

Update: 2021-06-10 11:49 GMT

ಹೊಸದಿಲ್ಲಿ: ಯೋಗ ಮತ್ತು ಆಯುರ್ವೇದ ತಮ್ಮನ್ನು ಇಲ್ಲಿಯ ತನಕ ಕೋವಿಡ್ ಸೋಂಕಿನಿಂದ ರಕ್ಷಿಸಿದೆ ಎಂದು ಈ ಹಿಂದೆ ಹೇಳಿದ್ದ ಉದ್ಯಮಿ ಮತ್ತು ಯೋಗ ಗುರು  ರಾಮದೇವ್, ತಾವು ಕೋವಿಡ್-19 ಲಸಿಕೆಯ ಮೊದಲ ಡೋಸ್ ಅನ್ನು ಸದ್ಯವೇ ಪಡೆದುಕೊಳ್ಳುವುದಾಗಿ ತಿಳಿಸಿದ್ದಾರೆ.

"ಸೋಂಕಿನ ವಿರುದ್ಧ ರಕ್ಷಣೆ ದೊರೆಯಲು ಎಲ್ಲರೂ ಎರಡು ಡೋಸ್ ಲಸಿಕೆಯನ್ನು ಪಡೆಯಬೇಕು  ಹಾಗೂ ಯೋಗ ಅಭ್ಯಸಿಸಿ ಆಯುರ್ವೇದದ ಪ್ರಯೋಜನ ಪಡೆಯಬೇಕು, ಇದು ಕೋವಿಡ್ ಸೋಂಕಿನಿಂದ ಸಾವುಗಳನ್ನು ತಡೆಯುತ್ತದೆ" ಎಂದು ರಾಮದೇವ್ ಹೇಳುತ್ತಿರುವ ವೀಡಿಯೋವನ್ನು ಜನ್‍ಟಿವಿ ಟ್ವೀಟ್ ಮಾಡಿದೆ.

"ತುರ್ತು ಸಂದರ್ಭಗಳಲ್ಲಿ ಹಾಗೂ ಶಸ್ತ್ರಕ್ರಿಯೆಗಳಿಗೆ ಸಂಬಂಧಿಸಿದಂತೆ  ಆಲೋಪಥಿ ಪದ್ಧತಿ ಹಾಗೂ ಚಿಕಿತ್ಸೆಯೇ ಉತ್ತಮ ಎಂಬ ಕುರಿತು ಯಾವುದೇ ಸಂಶಯವಿಲ್ಲ ಆದರೆ ಇತರ ಜೀವಕ್ಕೆ ಅಪಾಯವುಂಟು ಮಾಡಬಹುದಾದ ರೋಗಗಳು ಹಾಗೂ ಗುಣಮುಖವಾಗಲು ಸಾಧ್ಯವಾಗದೇ ಇರುವ ಸಮಸ್ಯೆಗಳನ್ನು ಯೋಗ, ಆಯುರ್ವೇದದಂತಹ ಪ್ರಾಚೀನ ಪದ್ಧತಿಗಳಿಂದ ಗುಣಪಡಿಸಬಹುದು, ಇದು ಚರ್ಚೆಯ ವಿಷಯವಲ್ಲ," ಎಂದು ರಾಮದೇವ್ ಹೇಳಿದ್ದಾರೆ.

``ತಾನು ಆಧುನಿಕ ಔಷಧೀಯ ಪದ್ಧತಿಯ ವಿರುದ್ಧವಲ್ಲ ಆದರೆ  ಆಧುನಿಕ ಚಿಕಿತ್ಸೆಗೆ ದುಬಾರಿ ಮೊತ್ತ ಸಂಗ್ರಹಿಸುವುದನ್ನು ವಿರೋಧಿಸುತ್ತೇನೆ,'' ಎಂದು ಅವರು ಹೇಳಿದರು.

ಅಲೋಪಥಿ ಚಿಕಿತ್ಸಾ ಪದ್ಧತಿಯನ್ನು ಟೀಕಿಸಿ ವೈದ್ಯರ ಆಕ್ರೋಶಕ್ಕೆ ಈಗಾಗಲೇ ತುತ್ತಾಗಿರುವ ರಾಮದೇವ್ ಈಗ ವೈದ್ಯರನ್ನು ಈ ಭೂಮಿಗೆ ಒಂದು ವರದಾನ ಎಂದು ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News