ಮೊರಟೋರಿಯಮ್ ಅವಧಿ ಮತ್ತೆ ಆರಂಭಿಸಲು ಕೋರಿ ಸಲ್ಲಿಸಿರುವ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

Update: 2021-06-11 11:50 GMT

ಹೊಸದಿಲ್ಲಿ: ಕೋವಿಡ್ -19 ರ ಎರಡನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕುಗಳ ಸಾಲದ ಕಂತು ಕಟ್ಟುವುದರಿಂದ ಗ್ರಾಹಕರಿಗೆ ವಿನಾಯಿತಿಗಾಗಿ ಹೊಸತಾಗಿ ಮೊರಟೋರಿಯಮ್ ಅವಧಿ ಆರಂಭಿಸುವ ಕುರಿತು ಬೇಡಿಕೆ ಇಟ್ಟು ಸಲ್ಲಿಸಿರುವ  ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಮೊರಟೋರಿಯಮ್ ಅವಧಿ ಕುರಿತು ಆದೇಶ ಹೊರಡಿಸಲು ಉನ್ನತ ನ್ಯಾಯಾಲಯ ನಿರಾಕರಿಸಿತು ಹಾಗೂ  ಅರ್ಜಿಯಲ್ಲಿ ಎತ್ತಿರುವ ವಿಷಯಗಳು ನೀತಿ ನಿರ್ಧಾರಗಳ ಕ್ಷೇತ್ರದಲ್ಲಿದೆ ಎಂದು ಹೇಳಿದೆ.

ಆದಾಗ್ಯೂ, ಈ ಕುರಿತು  ಸೂಕ್ತ ಆದೇಶವನ್ನು ನಿರ್ಣಯಿಸುವುದು ಹಾಗೂ  ರವಾನಿಸುವುದು ಸರಕಾರಕ್ಕೆ ಬಿಟ್ಟ ವಿಚಾರ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕಳೆದ ವರ್ಷ ಮಾರ್ಚ್ ನಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದಾಗ ಮಾರ್ಚ್ 1ರಿಂದ ಮೇ 31ರ ತನಕ ಬ್ಯಾಂಕುಗಳ ಸಾಲದ ಕಂತು ಕಟ್ಟುವುದರಿಂದ ಗ್ರಾಹಕರಿಗೆ ವಿನಾಯಿತಿ ಘೋಷಿಸುವಂತೆ ಬ್ಯಾಂಕ್ ಗಳಿಗೆ ಆರ್ ಬಿ ಐ ಸೂಚಿಸಿತ್ತು. ನಂತರ ಈ ಮೊರಟೋರಿಯಮ್ ಅವಧಿಯನ್ನು ಆಗಸ್ಟ್ 31ರ ತನಕವೂ ವಿಸ್ತರಿಸಿತ್ತು. ಈ ವೇಳೆ ಬಹಷ್ಟು ಗ್ರಾಹಕರು ಇದರ ಅವಕಾಶ ಪಡೆದು 6 ತಿಂಗಳು ಸಾಲದ ಕಂತುಕಟ್ಟಿರಲಿಲ್ಲ. ಆ ನಂತರ ಸಾಲದ ಇಎಂಐನ ಅಸಲಿ ಹಣದ ಜೊತೆಗೆ ಬಡ್ಡಿ ಹಾಗೂ ಚಕ್ರಬಡ್ಡಿಯನ್ನು ಹಲವು ಬ್ಯಾಂಕ್ ಗಳು ಗ್ರಾಹಕರ ಮೇಲೆ ಹೇರಿದ್ದವು. ಇದನ್ನು ಆಕ್ಷೇಪಿಸಿ ಗ್ರಾಹಕರು ಚಕ್ರಬಡ್ಡಿ ಮನ್ನಾ ಮಾಡಲು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News