ಯುಎಇಯಲ್ಲಿ ಸೈಬರ್ ದಾಳಿಗಳನ್ನು ನಿವಾರಿಸುವ ಕ್ವಾಂಟಮ್ ಕಂಪ್ಯೂಟರ್ ಸಿದ್ಧ

Update: 2021-06-11 17:30 GMT
ಸಾಂದರ್ಭಿಕ ಚಿತ್ರ

ದುಬೈ (ಯುಎಇ), ಜೂ. 11: ದೇಶದ ಮೊದಲ ಕ್ವಾಂಟಮ್ ಕಂಪ್ಯೂಟರ್ ಸಿದ್ಧವಾಗಿದೆ ಎಂದು ಯುಎಇ ಘೋಷಿಸಿದೆ. ಅದೇ ವೇಳೆ, ಕ್ವಾಂಟಮ್ ಕಂಪ್ಯೂಟರ್ ಮೇಲೆ ನಡೆಯುವ ದಾಳಿಗಳನ್ನು ತಡೆದು ರಹಸ್ಯ ಮಾಹಿತಿಗಳನ್ನು ಸಂರಕ್ಷಿಸುವುದಕ್ಕಾಗಿ ಮೊದಲ ಪೋಸ್ಟ್-ಕ್ವಾಂಟಮ್ ಕ್ರಿಪ್ಟೊಗ್ರಫಿ (ಪಿಕ್ಯೂಸಿ) ಸಾಫ್ಟ್ವೇರ್ ಲೈಬ್ರರಿಯೊಂದನ್ನೂ ಅಭಿವೃದ್ಧಿಪಡಿಸುತ್ತಿರುವುದಾಗಿ ಅದು ಹೇಳಿದೆ.


‘‘ಸಾಮಾನ್ಯವಾಗಿ ಕನ್ನಗಾರರು ಕಂಪ್ಯೂಟರ್ ವ್ಯವಸ್ಥೆಗಳ ಮೇಲೆ ದಾಳಿ ಮಾಡಲು ಕ್ವಾಂಟಮ್ ಕಂಪ್ಯೂಟರ್ಗಳನ್ನು ಬಳಸುತ್ತಾರೆ. ಪಿಕ್ಯೂಸಿ ಲೈಬ್ರರಿಯು ಕ್ವಾಂಟಮ್ ಕಂಪ್ಯೂಟರ್ನ ದಾಳಿಗಳನ್ನು ಎದುರಿಸಿ ಕಂಪ್ಯೂಟರ್ಗಳ ರಹಸ್ಯ ದತ್ತಾಂಶಗಳನ್ನು ರಕ್ಷಿಸುತ್ತದೆ’’ ಎಂದು ಟೆಕ್ನಾಲಜಿ ಇನೋವೇಶನ್ ಇನ್ಸ್ಟಿಟ್ಯೂಟ್ನ ಕ್ರಿಪ್ರೋರಿಸರ್ಚ್ ಸೆಂಟರ್ನಲ್ಲಿ ಪ್ರಧಾನ ಸಂಶೋಧಕಿಯಾಗಿರುವ ಕ್ರಿಪ್ರೋತಜ್ಞೆ ಡಾ. ನಜ್ವಾ ಆರಜ್ ಹೇಳುತ್ತಾರೆ.

ಮೊದಲ ಪಿಕ್ಯೂಸಿ ಸಾಫ್ಟ್ವೇರ್ ಲೈಬ್ರರಿಯೊಂದಿಗೆ ಯುಎಇಯು ಸುಧಾರಿತ ಡಿಜಿಟಲ್ ದತ್ತಾಂಶ ಸಂರಕ್ಷಣಾ ಸಾಮರ್ಥ್ಯಗಳನ್ನು ಪಡೆದಿರುವ ದೇಶಗಳ ಸಾಲಿಗೆ ಯುಎಇಯೂ ಸೇರ್ಪಡೆಗೊಂಡಿದೆ ಎಂದು ಡಾ. ನಜ್ವಾ ಹೇಳಿದರು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News