ಟಿಎಂಸಿಗೆ ಸೇರಿದ ಮುಕುಲ್‌ ರಾಯ್‌ ಪುತ್ರನಿಗೆ ನೀಡಿದ್ದ ʼವೈʼ ಶ್ರೇಣಿಯ ಭದ್ರತೆಯನ್ನು ಹಿಂಪಡೆದ ಕೇಂದ್ರ ಸರಕಾರ

Update: 2021-06-13 08:10 GMT

ಕೋಲ್ಕತ್ತ: ಮುಕುಲ್‌ ರಾಯ್‌ ರವರ ಪುತ್ರ ಸುಭಾಂಶು ರಾಯ್‌ ಅವರಿಗೆ ಒದಗಿಸಿದ್ದ ಯೈ ಶ್ರೇಣಿಯ ಭದ್ರತೆಯನ್ನು ಕೇಂದ್ರ ಸರಕಾರ ಹಿಂಪಡೆದುಕೊಂಡಿದೆ ಎಂದು ತಿಳಿದು ಬಂದಿದೆ. ಸುಭಾಂಶು ರಾಯ್ ಇತ್ತೀಚೆಗೆ ತಮ್ಮ ತಂದೆಯೊಂದಿಗೆ ಬಿಜೆಪಿಯಿಂದ ಮರಳಿ ತೃಣಮೂಲ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಮುಂದೆ ಸುಭಾಂಶು ರಾಐ ಗೆ ರಾಜ್ಯ ಪೊಲೀಸ್‌ ಭದ್ರತಾ ರಕ್ಷಣೆ ನೀಡಲಾಗುವುದು ಎಂದು ತಿಳಿದು ಬಂದಿದೆ. 

ತೃಣಮೂಲ ಕಾಂಗ್ರೆಸ್ ಚುನಾವಣೆಯ ಗೆಲುವಿನ ನಂತರ ಬಿಜೆಪಿ ಪಕ್ಷವು ಮತದಾನದ ನಂತರದ ಹಿಂಸಾಚಾರವನ್ನು ತೀವ್ರವಾಗಿ ಆರೋಪಿಸಿದ ನಂತರ ಮೋದಿ ಸರ್ಕಾರ ಕಳೆದ ತಿಂಗಳು ಬಿಜೆಪಿಯಿಂದ ಹೊಸದಾಗಿ ಚುನಾಯಿತರಾದ ಎಲ್ಲ ಶಾಸಕರಿಗೆ ಭದ್ರತಾ ರಕ್ಷಣೆ ನೀಡಿತ್ತು.

ಈ ಹಿಂದೆ, ಮೋದಿ ಸರ್ಕಾರ ಒದಗಿಸಿದ್ದ ಭದ್ರತಾ ರಕ್ಷಣೆಯನ್ನು ಹಿಂಪಡೆಯುವಂತೆ ಮುಕುಲ್ ರಾಯ್ ಕೇಂದ್ರವನ್ನು ಕೇಳಿದ್ದರು. ಮುಕುಲ್ ರಾಯ್ ಮತ್ತು ಅವರ ಪುತ್ರ ಸುಭಾಂಶು ಇಬ್ಬರೂ ಮಮತಾ ಬ್ಯಾನರ್ಜಿ ಉಪಸ್ಥಿತಿಯಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ್ದರು. ಹೆಚ್ಚಿನ ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರು ಟಿಎಂಸಿಗೆ ಸೇರಬಹುದು ಎಂಬ ಊಹಾಪೋಹಗಳೂ ಕೇಳಿ ಬರುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News