ಅಂತರ್‌ರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತನೆ: ನಾಲ್ವರು ಎಟಿಸಿ ವಶಕ್ಕೆ

Update: 2021-06-13 12:01 GMT

ಬೆಂಗಳೂರು, ಜೂ.13: ಅಂತರ್‍ರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತನೆ ಪ್ರಕರಣ ಸಂಬಂಧ ನಾಲ್ವರನ್ನು ಭಯೋತ್ಪಾದಕ ನಿಗ್ರಹ ದಳ(ಎಟಿಸಿ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳಾದ ಇಬ್ರಾಹಿಂ ಹಾಗೂ ಗೌತಮ್ ಬಾಯ್ಬಿಟ್ಟ ಮಾಹಿತಿ ಆಧರಿಸಿ ಎಟಿಸಿ ತನಿಖಾಧಿಕಾರಿಗಳು, ತಮಿಳುನಾಡು ಮೂಲದ ನಾಲ್ವರನ್ನು ವಶಕ್ಕೆ ಪಡೆದುಕೊಂಡು ನಗರಕ್ಕೆ ಕರೆತಂದಿದ್ದಾರೆ ಎನ್ನಲಾಗಿದೆ.

ಆರೋಪಿಗಳು ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಮಾರ್ಪಡಿಸಲು ಬೇಕಾದ ಸಿಮ್ ಕಾರ್ಡ್ ಗಳನ್ನು ತಮಿಳುನಾಡು, ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಪಡೆದು ಕೊರಿಯರ್ ಮುಖಾಂತರ ತಲುಪಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ಸಿಮ್ ಜಪ್ತಿ: ಈಗಾಗಲೇ ಆರೋಪಿಗಳಿಂದ 30 ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಅಳವಡಿಸಲಾಗಿದ್ದ, 960 ಸಿಮ್ ಕಾರ್ಡ್ ಗಳನ್ನು ಜಪ್ತಿ ಮಾಡಿಕೊಂಡಿರುವ ಎಟಿಸಿ ಅಧಿಕಾರಿಗಳು ಮತ್ತೆ ಬಿಟಿಎಂ ಲೇಔಟ್‍ನಲ್ಲಿದ್ದ ಇಬ್ರಾಹಿಂಗೆ ಸೇರಿದ ಜಾಗದಿಂದ ಇನ್ನೂ 15 ಸಿಮ್ ಬಾಕ್ಸ್ ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News