ರಕ್ಷಣಾ ವಲಯದ ಆವಿಷ್ಕಾರಕ್ಕೆ ಕೇಂದ್ರದಿಂದ 498.8 ಕೋ. ರೂ. ಬಜೆಟ್ ಬೆಂಬಲ

Update: 2021-06-13 18:32 GMT

ಹೊಸದಿಲ್ಲಿ, ಜೂ. 13: ರಕ್ಷಣಾ ವಲಯದಲ್ಲಿ ಸಂಶೋಧನೆ ಹಾಗೂ ಆವಿಷ್ಕಾರ ಉತ್ತೇಜಿಸಲು ಸುಮಾರು 500 ಕೋಟಿ ರೂಪಾಯಿ ಬಜೆಟ್ ಬೆಂಬಲ ನೀಡಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರವಿವಾರ ಅನುಮೋದನೆ ನೀಡಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ. 

ರಕ್ಷಣಾ ಶ್ರೇಷ್ಠತೆ (ಐಡಿಇಎಕ್ಸ್)-ರಕ್ಷಣಾ ಆವಿಷ್ಕಾರ ಸಂಘಟನೆ (ಡಿಐಒ)ಯ ಆವಿಷ್ಕಾರಗಳಿಗೆ ಮುಂದಿನ 5 ವರ್ಷಗಳ ಕಾಲ 498.8 ಕೋಟಿ ರೂಪಾಯಿ ಬಜೆಟ್ ನೆರವು ನೀಡಲು ಕೇಂದ್ರ ಸರಕಾರ ಅನುಮೋದನೆ ನೀಡಿದೆ. ಐಡಿಇಎಕ್ಸ್ ರೂಪಿಸಿದ ಚೌಕಟ್ಟು ರೂಪಿಸಿದ ಹಾಗೂ ರಕ್ಷಣಾ ಉತ್ಪಾದನಾ ಇಲಾಖೆ (ಡಿಡಿಪಿ) ಡಿಐಒ ಸ್ಥಾಪಿಸಿದ ಬಳಿಕ ಆವಿಷ್ಕಾರಗಳನ್ನು ಉತ್ತೇಜಿಸುವ ಯೋಜನೆಯ ಒಂದು ಭಾಗ ಇದಾಗಿದೆ. ಸುಮಾರು 300 ಸ್ಟಾರ್ಟ್ ಅಪ್ ಗಳು, ವೈಯಕ್ತಿಕ ಆವಿಷ್ಕಾರ ಮಾಡುವವರು, ಅತಿಸೂಕ್ಷ್ಮ ಸಣ್ಣ ಹಾಗೂ ಮಧ್ಯಮ ಉದ್ಯಮ (ಎಂಎಸ್ಎಂಇ)ಗಳು ಹಾಗೂ ಡಿಐಒ ಚೌಕಟ್ಟಿನ ಅಡಿಯ 20 ಪಾಲುದಾರ ಸಂಸ್ಥೆಗಳಿಗೆ ಹಣಕಾಸಿನ ಬೆಂಬಲ ನೀಡುವ ಗುರಿಯನ್ನು ಈ ಯೋಜನೆ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News