ಇದು ದೇಶದ ಅತ್ಯುತ್ತಮ ಜೀವನಯೋಗ್ಯ ನಗರ!

Update: 2021-06-19 03:52 GMT

ಹೊಸದಿಲ್ಲಿ, ಜೂ.19: ದೇಶದ ಅತ್ಯುತ್ತಮ ಜೀವನಯೋಗ್ಯ ನಗರ ಎಂಬ ಹೆಗ್ಗಳಿಕೆಗೆ ರಾಜ್ಯ ರಾಜಧಾನಿ ಬೆಂಗಳೂರು ಪಾತ್ರವಾಗಿದೆ. ಆದರೆ ರಾಷ್ಟ್ರ ರಾಜಧಾನಿ ದಿಲ್ಲಿ ಅಗ್ರ 5 ನಗರಗಳ ಪಟ್ಟಿಯಲ್ಲಿಲ್ಲ.

ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರೋನ್ಮೆಂಟ್ ಬಿಡುಗಡೆ ಮಾಡಿರುವ 'ಈಸ್ ಆಫ್ ಲಿವಿಂಗ್ ಇಂಡೆಕ್ಸ್-2020"ಯಲ್ಲಿ ದಿಲ್ಲಿ ಆರನೇ ಸ್ಥಾನದಲ್ಲಿದೆ. ಬೆಂಗಳೂರಿನ ಬಳಿಕ ಚೆನ್ನೈ, ಶಿಮ್ಲಾ, ಭುವನೇಶ್ವರ ಮತ್ತು ಮುಂಬೈ ನಗರಗಳು ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.

ಈ ಸೂಚ್ಯಂಕವು ಸಿಎಸ್‌ಇ ಇತ್ತೀಚೆಗೆ ಬಿಡುಗಡೆ ಮಾಡಿರುವ ಭಾರತದ ಪರಿಸರ ಸ್ಥಿತಿ-2021 ವರದಿಯ ಭಾಗವಾಗಿದೆ. ಆದರೆ ದಿಲ್ಲಿ, ಭೋಪಾಲ್, ರಾಯಪುರ ಮತ್ತು ಮುಂಬೈ ಬಳಿಕ ನಾಲ್ಕನೇ ಸ್ಥಾನದಲ್ಲಿದೆ. ಜೀವನಯೋಗ್ಯ ನಗರ ಸೂಚ್ಯಂಕವನ್ನು ನಿರ್ಧರಿಸಲು ನಾಲ್ಕು ಮಾನದಂಡಗಳನ್ನು ಬಳಸಲಾಗಿದೆ. ಅವುಗಳೆಂದರೆ ಜೀವನಗುಣಮಟ್ಟ, ಆರ್ಥಿಕ ಸಾಮರ್ಥ್ಯ, ಸುಸ್ಥಿರತೆ ಮತ್ತು ನಾಗರಿಕರ ಗ್ರಹಿಕೆ. ಈ ಮಾನಡಂಗಳ ಆಧಾರದಲ್ಲಿ ಅಂಕಗಳನ್ನು ನೀಡಲಾಗಿದೆ. ದಿಲ್ಲಿ ಮೊದಲ ಮೂರು ಮಾನದಂಡಗಳಲ್ಲಿ 50ರಿಂದ 60 ಅಂಕ ಪಡೆದಿದ್ದರೆ, ನಾಗರಿಕರ ಗ್ರಹಿಕೆಯಲ್ಲಿ 69.4ರಷ್ಟು ಅಂಕ ಪಡೆದಿದೆ. ಜನರ ಭಾವನೆಯಲ್ಲಿ ಭುವನೇಶ್ವರ 94.8 ಮತ್ತು ಜೈಪುರ 87.1ರಷ್ಟು ಅಂಕ ಪಡೆದಿವೆ. ಒಟ್ಟಾರೆ ಅಂಕಗಳಲ್ಲಿ ಬೆಂಗಳೂರು ಅಗ್ರಸ್ಥಾನಿಯಾಗಿದೆ.

"100ರ ಪೈಕಿ 78.8 ಅಂಕ ಪಡೆಯುವ ಮೂಲಕ ಕೇವಲ ಒಂದು ರಾಜ್ಯ ರಾಜಧಾನಿ (ಬೆಂಗಳೂರು) ಉತ್ತಮ ಆರ್ಥಿಕ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಉಳಿದ ನಾಲ್ಕು ರಾಜ್ಯ ರಾಜಧಾನಿಗಳು (ಚೆನ್ನೈ, ಮುಂಬೈ, ದಿಲ್ಲಿ ಮತ್ತು ಹೈದರಾಬಾದ್) ಮಧ್ಯಮ ಪ್ರಮಾಣದ ಆರ್ಥಿಕ ಅವಕಾಶಗಳನ್ನು ಒದಗಿಸಿವೆ. ಉಳಿದ ಎಲ್ಲ ನಗರಗಳು 30ಕ್ಕಿಂತ ಕಡಿಮೆ ಅಂಕ ಹೊಂದಿವೆ" ಎಂದು ವರದಿ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News