ವ್ಯಕ್ತಿಯೊಬ್ಬನಿಗೆ 30 ನಿಮಿಷಗಳಲ್ಲಿ ಕೋವಿಡ್-19 ಲಸಿಕೆಯ ಎರಡು ಡೋಸ್ ನೀಡಿದ ದಾದಿ!

Update: 2021-06-21 15:58 GMT

ಬಾರಿಪಾಡ: ಒಡಿಶಾದ ಮಯೂರ್ ಭಂಜ್ ಜಿಲ್ಲೆಯ 51 ವರ್ಷದ ವ್ಯಕ್ತಿಯೊಬ್ಬನಿಗೆ ಕೋವಿಡ್ -19 ಲಸಿಕೆಯ ಎರಡು ಡೋಸ್ ಅನ್ನು ಕೇವಲ 30 ನಿಮಿಷಗಳಲ್ಲಿ ನೀಡಲಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ರಘುಪುರ ಗ್ರಾಮದ ಪ್ರಸನ್ನ ಕುಮಾರ್ ಸಾಹು ಎಂದು ಗುರುತಿಸಲ್ಪಟ್ಟ ವ್ಯಕ್ತಿ ಶನಿವಾರ ಸ್ಲಾಟ್ ಕಾಯ್ದಿರಿಸಿದ ನಂತರ ಮೊದಲ ಡೋಸ್ ಗಾಗಿ ಖುಂಟಾಪುರದ ಸತ್ಯಸಾಯಿ ಸರ್ಕಾರಿ ಪ್ರೌಢಶಾಲೆಯಲ್ಲಿನ ತಾತ್ಕಾಲಿಕ ಲಸಿಕೆ ಶಿಬಿರಕ್ಕೆ ಭೇಟಿ ನೀಡಿದ್ದರು.

ಮೊದಲ ಡೋಸ್ ತೆಗೆದುಕೊಂಡ ನಂತರ, ತಾನು 30 ನಿಮಿಷಗಳ ಕಾಲ ವಿಶ್ರಾಂತಿ ಪಡೆದಿದ್ದೆ. ಈ ಸಮಯದಲ್ಲಿ ದಾದಿಯೊಬ್ಬರು ಲಸಿಕೆಯ ಮತ್ತೊಂದು ಡೋಸ್ ಅನ್ನು ತನಗೆ ತಪ್ಪಾಗಿ ನೀಡಿದರು ಎಂದು ಸಾಹು ಹೇಳಿದರು.

"ನಾನು ದಾದಿಯನ್ನು ಎಚ್ಚರಿಸಿದ್ದೆ. ಆದರೆ, ನರ್ಸ್ ಈಗಾಗಲೇ ಲಸಿಕೆಯನ್ನು ನೀಡಿದ್ದರು" ಎಂದು ಸಾಹು ಹೇಳಿದರು.

ಎರಡು ಚುಚ್ಚಮದ್ದನ್ನು ಪಡೆದಿದ್ದ ಸಾಹು ಅವರನ್ನು ಇನ್ನೂ ಎರಡು ಗಂಟೆಗಳ ಕಾಲ ವೀಕ್ಷಣೆಗೆ ಒಳಪಡಿಸುವಂತೆ ಕೇಳಲಾಯಿತು ಹಾಗೂ  ಅವರಿಗೆ ಒ ಆರ್ ಎಸ್ ಪಾನೀಯವನ್ನು ನೀಡಲಾಯಿತು. ಮೊದಲ ಡೋಸ್ ಅನ್ನು ಪಡೆದ ಈ ವ್ಯಕ್ತಿ ವೀಕ್ಷಣಾ ಕೊಠಡಿಗೆ ಹೋಗುವ ಬದಲು ವ್ಯಾಕ್ಸಿನೇಷನ್ ಸ್ಥಳದಲ್ಲಿ ಕುಳಿತಿದ್ದ ಹೀಗಾಗಿ ತಪ್ಪಾಗಿ ವ್ಯಕ್ತಿಗೆ ಎರಡನೇ ಡೋಸ್ ಅನ್ನು ನೀಡಲಾಯಿತು" ಎಂದು ಕೇಂದ್ರದ ವೀಕ್ಷಕ ರಾಜೇಂದ್ರ ಬೆಹರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News