ನೈಜೀರಿಯ: ಪೊಲೀಸ್ ಅಧಿಕಾರಿಯಿಂದ ಐವರ ಹತ್ಯೆ

Update: 2021-06-21 17:32 GMT

ಲಾಗೋಸ್ (ನೈಜೀರಿಯ), ಜೂ. 21: ನೈಜೀರಿಯದಲ್ಲಿ ಪೊಲೀಸ್ ಅಧಿಕಾರಿಯೊಬ್ಬ ರವಿವಾರ ಗುಂಡಿನ ದಾಳಿ ನಡೆಸಿ ಐವರು ನಾಗರಿಕರನ್ನು ಕೊಂದಿದ್ದಾನೆ ಹಾಗೂ ನಾಲ್ವರನ್ನು ಗಾಯಗೊಳಿಸಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಯು ಎನುಗು ಎಂಬ ರಾಜ್ಯದ ವಸತಿ ಸಂಕೀರ್ಣವೊಂದಕ್ಕೆ ನುಗ್ಗಿ ಅಲ್ಲಿನ ಜನರ ಮೇಲೆ ಯದ್ವಾತದ್ವ ಗುಂಡು ಹಾರಿಸಿದನು ಎಂದು ರಾಜ್ಯದ ಪೊಲೀಸ್ ಮುಖ್ಯಸ್ಥರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಹಂತಕ ಪೊಲೀಸ್ ಅಧಿಕಾರಿಯನ್ನು ಪೊಲಿಸರು ಬಂಧಿಸಿದ್ದಾರೆ. ಹತ್ಯಾಕಾಂಡಕ್ಕೆ ಕಾರಣ ಗೊತ್ತಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News