ಭಾರತದಲ್ಲಿ 91 ದಿನಗಳಲ್ಲಿ ಮೊದಲ ಬಾರಿಗೆ ದೈನಂದಿನ ಕೋವಿಡ್ ಕೇಸ್ 50,000 ಕ್ಕಿಂತ ಕಡಿಮೆ

Update: 2021-06-22 05:14 GMT
photo: Indian express

ಹೊಸದಿಲ್ಲಿ: ದೇಶದಲ್ಲಿ ಮಂಗಳವಾರ 24 ಗಂಟೆಗಳಲ್ಲಿ 42,640 ಹೊಸ ಕೋವಿಡ್ -19 ಪ್ರಕರಣಗಳು ವರದಿ ಯಾಗಿದೆ. 91 ದಿನಗಳಲ್ಲಿ ಮೊದಲ ಬಾರಿಗೆ ದೇಶದಲ್ಲಿ 50,000 ಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗಿವೆ.

ಕಳೆದ 24 ಗಂಟೆಗಳಲ್ಲಿ 5 ರಾಜ್ಯಗಳಲ್ಲಿ ಗರಿಷ್ಟ ಕೇಸ್ ಗಳು ವರದಿಯಾಗಿವೆ. ಕೇರಳದಲ್ಲಿ 7,449 ಪ್ರಕರಣಗಳು, ತಮಿಳುನಾಡು 7,427 ಪ್ರಕರಣ, , ಮಹಾರಾಷ್ಟ್ರ 6,270 ಪ್ರಕರಣಗಳು, ಕರ್ನಾಟಕ 4,867 ಪ್ರಕರಣಗಳು ಹಾಗೂ ಒಡಿಶಾದಲ್ಲಿ 3,031 ಪ್ರಕರಣಗಳು ವರದಿಯಾಗಿವೆ.

ಸುಮಾರು 70 ಪ್ರತಿಶತ ಹೊಸ ಪ್ರಕರಣಗಳು ಈ ಐದು ರಾಜ್ಯಗಳಿಂದ ವರದಿಯಾಗಿದ್ದು, ಕೇರಳವೊಂದರಲ್ಲೇ ಶೇ 17.47 ರಷ್ಟು ಹೊಸ ಕೇಸ್ ಗಳಿವೆ.

ದೇಶದಲ್ಲಿ ಮಂಗಳವಾರ 24 ಗಂಟೆಗಳಲ್ಲಿ 1,167 ಕೋವಿಡ್ ಸಾವುಗಳು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ ಸಾವು-ನೋವುಗಳು( 352) ವರದಿಯಾಗಿದೆ. ತಮಿಳುನಾಡಿನಲ್ಲಿ ಒಂದೇ ದಿನ 189 ಸಾವುಗಳು ಸಂಭವಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News