ಲಾದನ್‌ ನನ್ನು ಇಮ್ರಾನ್‌ ಖಾನ್‌ ಬಾಯ್ತಪ್ಪಿ ʼಹುತಾತ್ಮʼ ಎಂದು ಹೇಳಿದ್ದಾರೆ: ಪಾಕ್‌ ಮಾಹಿತಿ ಸಚಿವ ಹೇಳಿಕೆ

Update: 2021-06-27 17:10 GMT

photo: twitter/@fawadchaudhry

ಇಸ್ಲಾಮಾಬಾದ್,ಜೂ.27: ಅಮೆರಿಕನ್ ಪಡೆಗಳಿಂದ ಹತ್ಯೆಗೀಡಾದ ಭಯೋತ್ಪಾದಕ ಸಂಘಟನೆ ಅಲ್ ಖಾಯಿದಾ ವರಿಷ್ಠ ಉಸಾಮಾ ಬಿನ್ ಲಾದೆನ್ ಹುತಾತ್ಮನೆಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬಾಯ್ತಪ್ಪಿ ಹೇಳಿದ್ದಾರೆಂದು ಪಾಕ್ ಮಾಹಿತಿ ಸಚಿವ ಫಾವದ್ ಚೌಧುರಿ ಸ್ಪಷ್ಟೀಕರಣ ನೀಡಿದ್ದಾರೆ.

ಜಿಯೋ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಅವರು ಪಾಕಿಸ್ತಾನವು ಉಸಾಮಾ ಬಿನ್ ಲಾದನ್ ನನ್ನು ಭಯೋತ್ಪಾದಕನೆಂದು ಹಾಗೂ ಅಲ್‌ ಖೈದಾವನ್ನು ಭಯೋತ್ಪಾದಕ ಸಂಘಟನೆಯೆಂದು ಪರಿಗಣಿಸುತ್ತದೆಯೆಂದು ಅವರು ಹೇಳಿದ್ದಾರೆ.
   
ಕಳೆದ ವರ್ಷದ ಜೂನ್ ನಲ್ಲಿ ಇಮ್ರಾನ್ ಖಾನ್ ರಾಷ್ಟ್ರೀಯ ಅಸೆಂಬ್ಲಿಯನ್ನುದ್ದೇಶಿಸಿ ಭಾಷಣ ಮಾಡುತ್ತಾ, ಅಮೆರಿಕನ್ ಪಡೆಗಳು ಅಬ್ಬೊಟಾಬಾದ್ನಲ್ಲಿ ದಾಳಿ ನಡೆಸಿ ಉಸಾಮಾಬಿನ್ ಲಾದೆನ್ ನನ್ನು ಹತ್ಯೆಗೈಯುವ ಮೂಲಕ ಆತನನ್ನು ಹುತಾತ್ಮನನ್ನಾಗಿ ಮಾಡಿದ್ದಾರೆ ಎಂದು ಹೇಳಿದ್ದುದು ವಿವಾದಕ್ಕೆ ಕಾರಣವಾಗಿತ್ತು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News