ಬೆಂಗಳೂರು: ಜುಲೈ 9ರಿಂದ ಬಿಎಂಟಿಸಿ ಮಾಸಿಕ ಪಾಸ್ ವಿತರಣೆ

Update: 2021-07-06 12:51 GMT

ಬೆಂಗಳೂರು, ಜು.6: ಬೆಂಗಳೂರು ನಗರಾದ್ಯಂತ ಬಿಎಂಟಿಸಿ ಬಸ್‍ಗಳ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವುದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಜು.9ರಿಂದ 31ರವರೆಗಿನ ಅವಧಿಗೆ ಬಿಎಂಟಿಸಿ ಬಸ್‍ಪಾಸ್‍ಗಳನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಬಿಎಂಟಿಸಿ, ಹಿರಿಯ ನಾಗರಿಕರ ಸಾಮಾನ್ಯ ಪಾಸ್ ದರ 720ರೂ. ಆಗಿದೆ. ಹಾಗೂ ಸಾಮಾನ್ಯ ಸೇವೆಯ ಪಾಸ್ 800ಆಗಿದ್ದು, ಬಿಎಂಟಿಸಿಯ ಬಸ್ ನಿಲ್ದಾಣಗಳಲ್ಲಿ ಪಾಸ್‍ಗಳು ವಿತರಣೆ ಮಾಡಲಾಗುತ್ತದೆ.

ಸೂಚನೆ: ಕಳೆದ ಎಪ್ರಿಲ್-2021ರಲ್ಲಿ ಬಿಎಂಟಿಸಿ ಮಾಸಿಕ ಪಾಸುಗಳನ್ನು ಪಡೆದಂತಹ ಪ್ರಯಾಣಿಕರು ಮುಷ್ಕರದ ಅವಧಿ ಹಾಗೂ ಕೋವಿಡ್ ಅವಧಿಯಲ್ಲಿ ಮಾಸಿಕ ಪಾಸುಗಳನ್ನು ಬಳಕೆ ಮಾಡಲು ಸಾಧ್ಯವಾಗದ ಕಾರಣ ಮಾಸಿಕ ಪಾಸ್ ಹಾಗೂ ಹಿರಿಯ ನಾಗರಿಕರ ಪಾಸ್‍ಗಳ ಮಾನ್ಯತಾ ಅವಧಿ ಜು.8ರವರೆಗೆ ಇರಲಿದೆ ಎಂದು ಬಿಎಂಟಿಸಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News