ಮಾದಕ ವಸ್ತು ಮಾರಾಟ: ಕಾಲೇಜು ವಿದ್ಯಾರ್ಥಿ ಹಾಗೂ ಓರ್ವ ವಿದೇಶಿ ಪ್ರಜೆಯ ಬಂಧನ

Update: 2021-07-06 13:30 GMT

ಬೆಂಗಳೂರು, ಜು.6: ಮಾದಕ ವಸ್ತುಗಳ ಮಾರಾಟ ಸರಬರಾಜು ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಉತ್ತರ ವಿಭಾಗದ ಪೊಲೀಸರು, ಕೊಕೇನ್ ಮಾರಾಟ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿ ಹಾಗೂ ನೈಜೀರಿಯನ್ ಪ್ರಜೆಯೋರ್ವನನ್ನು ಬಂಧಿಸಿದ್ದಾರೆ.

ಕಮ್ಮನಹಳ್ಳಿಯ ಪ್ರದೀಪ್ ಕುಮಾರ್(24), ನೈಜೀರಿಯಾದ ಫ್ರಾನ್ಸಿಸ್ ಬೋರ್‍ಟೆಂಗ್ ಎಂಬುವರು ಬಂಧಿತ ಆರೋಪಿಗಳೆಂದು ಪೊಲೀಸರು ಹೇಳಿದ್ದಾರೆ.

ಜೂ.26 ರಂದು ಜೆಸಿ ನಗರದ ಬಸ್ ನಿಲ್ದಾಣದ ಬಳಿ ಮೂವರು ಕಾರಿನಲ್ಲಿ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿಯಾಧರಿಸಿ ಕಾರ್ಯಾಚರಣೆ ದಾಳಿ ನಡೆಸಲಾಯಿತು. ದಾಳಿ ವೇಳೆ ಮೂವರು ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ತಮ್ಮ ಕಾಲೇಜಿನ ಇತರ ಸ್ನೇಹಿತರ ಜತೆ ಸೇರಿ ಡ್ರಗ್ಸ್ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿಗಳಿಂದ 60 ಗ್ರಾಂ ವೀಡ್ ಆಯಿಲ್, 1.1 ಕೆಜಿ ಗಾಂಜಾ, 127 ಗ್ರಾಂ ಎಂಡಿಎಂಎ, 8 ಗ್ರಾಂ ಕೊಕೇನ್, 3 ಮೊಬೈಲ್, 1 ಲ್ಯಾಪ್‍ಟಾಪ್, ಕಾರು, ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News