ಕೋವಿಡ್ ಪರಿಹಾರದ ಹಣ ಹಂಚುವಿಕೆಯಲ್ಲಿ ಆಗುತ್ತಿರುವ ತಾರತಮ್ಯ ಸರಿಪಡಿಸಲು ಮನವಿ

Update: 2021-07-07 14:15 GMT

ಬೆಂಗಳೂರು, ಜು.7: ಕೋವಿಡ್ ಪರಿಹಾರದ ಹಣ ಹಂಚುವಿಕೆಯಲ್ಲಿ ಆಗುತ್ತಿರುವ ತಾರತಮ್ಯ ಸರಿಪಡಿಸುವಂತೆ ಕೋರಿ ಹಿಂದುಳಿದ ಜಾತಿಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ರವೀಂದ್ರ ಕಲಾಕ್ಷೇತ್ರ ಗೆಳೆಯರ ಬಳಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ರಂಗಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿತು.

ರಂಗಭೂಮಿಯ ಸ್ಥಾಪಿತ ಹಿತಾಸಕ್ತಿಗಳು ಕನ್ನಡ ಮತ್ತು ಸಂಸ್ಕøತಿ ಇಲಾಖೆಯನ್ನು ಕೈಗೊಂಬೆ ಮಾಡಿಕೊಂಡು ಪ್ರಾಮಾಣಿಕ ರಂಗಕರ್ಮಿಗಳಿಗೆ ಅನ್ಯಾಯ ಎಸಗುತ್ತಿದ್ದಾರೆ. ಇದರಿಂದ, ರಾಜ್ಯ ಸರಕಾರಕ್ಕೆ ಮತ್ತು ರಂಗಭೂಮಿಗೆ ಅಪಖ್ಯಾತಿ ತರುತ್ತಿದ್ದಾರೆ. ಈ ಅನ್ಯಾಯವನ್ನು ಸರಿಪಡಿಸದಿದ್ದರೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಈ ಸಂದರ್ಭದಲ್ಲಿ ರಂಗ ಸಮಾಜ ಸದಸ್ಯ ಡಾ.ಹೆಲೆನ್ ಮೈಸೂರು, ಕರ್ನಾಟಕ ನಾಟಕ ಅಕಾಡಮಿ ಮಾಜಿ ಸದಸ್ಯ ಆರ್.ವೆಂಕಟರಾಜು, ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯ ಸಂಚಾಲಕರಾದ ಪಿ.ಆರ್.ರಾಜು, ಸೂರ್ಯ ಪ್ರಕಾಶ್ ಕೋಲಿ ಸೇರಿ ಸುಮಾರು ಇಪ್ಪತ್ತಕ್ಕಿಂತ ಹೆಚ್ಚು ಜನರ ನಿಯೋಗ ಇಲಾಖೆಯ ನಿರ್ದೇಶಕರಿಗೆ ಮನವಿ ಸಲ್ಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News