ಕೋವಿಡ್ 2ನೇ ಅಲೆ ನಂತರ ಜಾಗತಿಕ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಪ್ರಧಾನಿ ಮೋದಿಯ ರೇಟಿಂಗ್‌ ಭಾರೀ ಕುಸಿತ

Update: 2021-07-08 09:22 GMT

ಹೊಸದಿಲ್ಲಿ : ಭಾರತದಲ್ಲಿ ಸಾಕಷ್ಟು ಸಾವುನೋವುಗಳಿಗೆ ಕಾರಣವಾದ ಕೋವಿಡ್-19 ಎರಡನೇ ಅಲೆಯ ನಂತರ ಪ್ರಧಾನಿ ನರೇಂದ್ರ ಮೋದಿ 13 ಮಂದಿ ಜಾಗತಿಕ ಜನಪ್ರಿಯ ನಾಯಕರ ಪಟ್ಟಿಯಲ್ಲಿ ತಮ್ಮ ಟಾಪ್ ಸ್ಥಾನವನ್ನು ಕಳೆದುಕೊಂಡಿದ್ದಾರೆ.

ಅಮೆರಿಕಾದ ಮಾರ್ನಿಂಗ್ ಕನ್ಸಲ್ಟ್  ಸಂಸ್ಥೆಯ ಸಮೀಕ್ಷೆಯ ಪ್ರಕಾರ ಜೂನ್ 29ರಲ್ಲಿದ್ದಂತೆ ಮೋದಿ ಅವರ ಟಾಪ್ ಸ್ಥಾನ ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುವೆಲ್ ಲೋಪೆಝ್ ಒಬ್ರಡೊರ್ ಅವರ ಪಾಲಾಗಿದೆ.

ಮೋದಿ ಅವರ ಅಪ್ರೂವಲ್ ರೇಟಿಂಗ್ (ಉತ್ತಮ ನಾಯಕರೆಂದು ಒಪ್ಪುವ ಜನರ ಪ್ರಮಾಣ)  ಮಾರ್ಚ್ ಅಂತ್ಯದ ವೇಳೆಗೆ ಶೇ14ರಷ್ಟು ಕಡಿಮೆಯಾದರೆ ಮೇ 2020ರಿಂದೀಚೆಗೆ ಶೇ34ರಷ್ಟು ಕಡಿಮೆಯಾಗಿದೆ. ಭಾರತದಲ್ಲಿ ಕೋವಿಡ್ ಎರಡನೇ ಅಲೆಯನ್ನು ಸರಕಾರ ಸಮಾಧಾನಕರವಾಗಿ ನಿಭಾಯಿಸಿಲ್ಲ ಎಂಬ ವ್ಯಾಪಕ ಟೀಕೆಯ ನಡುವೆ ಈ ವರದಿ ಹೊರಬಿದ್ದಿದೆ.

ಮೋದಿ ಮಾತ್ರವಲ್ಲದೆ ಕೋವಿಡ್ ಸಾಂಕ್ರಾಮಿಕದಿಂದ ಹೆಚ್ಚಿನ ಜಾಗತಿಕ ನಾಯಕರ ಅಪ್ರೂವಲ್ ರೇಟಿಂಗ್‍ಗಳು ಕಡಿಮೆಯಾಗಿದೆ. ಮಾರ್ಚ್ ಹಾಗೂ ಜೂನ್ ನಡುವೆ 13 ಜಾಗತಿಕ ನಾಯಕರ ಪೈಕಿ ಕೇವಲ ಐದು ಮಂದಿಯ ರೇಟಿಂಗ್ ಏರಿಕೆ ಕಂಡಿದೆ.

ಜರ್ಮನಿಯ ಏಂಜೆಲಾ ಮರ್ಕೆಲ್ ಅವರ ರೇಟಿಂಗ್ ಶೇ11ರಷ್ಟು ಏರಿಕೆ ಕಂಡಿದೆಯಾದರೂ  ಡಿಸೆಂಬರ್ ಮತ್ತು ಜನವರಿಯಲ್ಲಿ ಶೇ20ಕ್ಕೂ ಅಧಿಕ ಪ್ರಮಾಣದಲ್ಲಿ ಆಕೆಯ ಅಪ್ರೂವಲ್ ರೇಟಿಂಗ್‍ಗಳ ಏರಿಕೆ ಪರಿಗಣಿಸಿದಾಗ ಇದು ಕಡಿಮೆಯಾಗಿದೆ.

ಮೋದಿ ಹೊರತಾಗಿ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರಾನ್ ಮತ್ತು ಜಪಾನ್ ಪ್ರಧಾನಿ ಯೋಶಿಹಿಡೆ ಸುಗ ಅವರ  ರೇಟಿಂಗ್ ಕೂಡ ಕ್ರಮವಾಗಿ ಶೇ6 ಹಾಗೂ ಶೇ9ರಷ್ಟು ಕಡಿಮೆಯಾಗಿದೆ.

ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಹಾಗೂ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಅಪ್ರೂವಲ್ ರೇಟಿಂಗ್ ಶೇ4ರಷ್ಟು ಕಡಿಮೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News