ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ನಾಂದಿ: ಅಂತರಿಕ್ಷದ ಅಂಚಿಗೆ ವಿಎಸ್ಎ ಯೂನಿಟಿ ಯಶಸ್ವಿ ಪ್ರಯಾಣ

Update: 2021-07-11 18:49 GMT

ವಾಶಿಂಗ್ಟನ್, ಜು.11: ಬಿಲಿಯಾಧೀಶ ಉದ್ಯಮಿ , ರಿಚರ್ಡ್ ಬ್ರಾನ್ಸನ್ ಅವರನ್ನು ಹೊತ್ತ ವರ್ಜಿನ್ ಗ್ಯಾಲಾಕ್ಟಿಕ್ನ ವಿಎಸ್ಎಸ್ ಯೂನಿಟಿ ಅಂತರಿಕ್ಷ ನೌಕೆಯು ರವಿವಾರ ನಭಕ್ಕೆ ಚಿಮ್ಮಿದ್ದು, ಬಾಹ್ಯಾಕಾಶ ಪ್ರವಾಸೋದ್ಯಮಕ್ಕೆ ಹೊಸ ನಾಂದಿ ಹಾಡಿದೆ.

ನ್ಯೂಮೆಕ್ಸಿಕೊದಲ್ಲಿರುವ ಬಾಹ್ಯಾಕಾಶ ಉಡಾವಣಾ ತಾಣ ಸ್ಪೇಸ್ಪೋರ್ಟ್ನಿಂದ ಸ್ಥಳೀಯ ಕಾಲಮಾನ ಬೆಳಗ್ಗೆ 8:40ಕ್ಕೆ ಸರಿಯಾಗಿ ವಿಎಸ್ಎಸ್ ಯೂನಿಟಿ ಹೊತ್ತ , ಮಾತೃನೌಕೆಯಾದ ಅವಳಿ ಫ್ಯೂಸೇಜ್ ಕ್ಯಾರಿಯರ್ ಜೆಟ್ ನಭಕ್ಕೆ ನೆಗೆಯಿತು. ಆನಂತರ ಮಾತೃನೌಕೆಯು ವಿಎಸ್ಎಸ್ ಯೂನಿಟಿಯನ್ನು ಅಂತರಿಕ್ಷದ ಅಂಚಿಗೆ ತಳ್ಳಿದೆ. ಒಂದು ತಾಸಿನೊಳಗೆ ಅದು 50 ಅಡಿ ಎತ್ತರದಲ್ಲಿ, ಬಾಹ್ಯಾಕಾಶದ ಅಂಚನ್ನು ತಲುಪಿದೆ. ಭೂಮಿಯಿಂದ 15 ಕಿ.ಮೀ. (50 ಸಾವಿರ ಅಡಿ) ಎತ್ತರದಲ್ಲಿ 90 ನಿಮಿಷಗಳ ಕಾಲ ಸುತ್ತಾಡಿದ ಬಳಿಕ ನೌಕೆಯು ಸ್ಪೇಸ್ ಪೋರ್ಟ್ ನಲ್ಲಿ ಯಶಸ್ವಿಯಾಗಿ ಭೂಸ್ಪರ್ಶ ಮಾಡಿದೆ.
 
ವಿಎಸ್ಎಸ್ ಯೂನಿಟಿ ನೌಕೆಯಲ್ಲಿ ರಿಚರ್ಡ್ ಬ್ರಾನ್ಸನ್ ಸೇರಿ ಒಟ್ಟು ಆರು ಮಂದಿ ಪ್ರಯಾಣಿಸಿದ್ದಾರೆ. ಭಾರತೀಯ ಮೂಲದ ಮಹಿಳೆ, ಏರೋನಾಟಿಕಲ್ ಎಂಜಿನಿಯರ್ ಶಿರೀಶಾ ಬಾಂದ್ಲಾ, ಪೈಲಟ್ಗಳಾದ ಡೇವ್ ಮ್ಯಾಕೆ ಮತ್ತು ಮೈಕೆಲ್ ಮಸೂಚಿ, ವರ್ಜಿನ್ ಗ್ಯಾಲಾಕ್ಟಿಕ್ ಸಂಸ್ಥೆಯ ಮುಖ್ಯ ಗಗನಯಾನ ಶಿಕ್ಷಕ ಬೆಥ್ಮೋಸ್, ಕಾರ್ಯನಿರ್ವಹಣಾ ಎಂಜಿನಿಯರ್ ಕಾಲಿನ್ ಬೆನ್ನೆಟ್ ಪ್ರಯಾಣಿಸಿದ್ದಾರೆ. ಅವರು ವರ್ಜಿನ್ ಗ್ಯಾಲಕ್ಟಿಕ್ ಸಂಸ್ಥೆಯ ವರಿಷ್ಠರೂ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News