ಕಾಲಿನ ಬೆರಳಿಗೆ ಮಾಸ್ಕ್ ನೇತುಹಾಕಿದ ಉತ್ತರಾಖಂಡ ಸಚಿವ!

Update: 2021-07-15 12:58 GMT
Photo: Twitter/@garimadasauni

ಹೊಸದಿಲ್ಲಿ: ಕೋವಿಡ್ ಸಾಂಕ್ರಾಮಿಕದ ಸಂದರ್ಭ ಮಾಸ್ಕ್ ಕಡ್ಡಾಯವಾಗಿ ಧರಿಸುವುದರ ಜತೆಗೆ ಅದನ್ನು ಸ್ವಚ್ಛವಾಗಿಟ್ಟುಕೊಳ್ಳುವುದೂ ಅಷ್ಟೇ ಅವಶ್ಯ. ಆದರೆ ಉತ್ತರಾಖಂಡದ ಸಚಿವ ಸ್ವಾಮಿ ಯತೀಶ್ವರಾನಂದ್ ಅವರು ಸಭೆಯೊಂದರಲ್ಲಿ ಭಾಗವಹಿಸುತ್ತಿರುವ ವೇಳೆ ತಮ್ಮ ಮಾಸ್ಕ್ ಅನ್ನು ಕಾಲಿನ ಬೆರಳಿಗೆ ನೇತುಹಾಕಿದ ಫೋಟೋ ಒಂದು ವೈರಲ್ ಆಗಿದೆಯಲ್ಲದೆ ಸಚಿವರು ವ್ಯಾಪಕ ಟೀಕೆಗೊಳಗಾಗಿದ್ದಾರೆ

ಸಭೆಯಲ್ಲಿ ಭಾಗವಹಿಸಿದ್ದವರ ಪೈಕಿ ಮಾಸ್ಕ್ ಧರಿಸದೇ ಇದ್ದವರು ಯತೀಶ್ವರಾನಂದ್ ಮಾತ್ರವಲ್ಲ. ಸಭೆಯಲ್ಲಿದ್ದ ಇತರ ಸಚಿವರಾದ ಬಿಷನ್ ಸಿಂಗ್ ಚುಪಲ್ ಹಾಗೂ ಸುಬೋಧ್ ಉನಿಯಾಲ್ ಕೂಡ ಮಾಸ್ಕ್ ಧರಿಸಿಲ್ಲ.

"ಇದು ಸಚಿವರು ತೋರಿಸಿರುವ ಗಂಭೀರತೆ. ಆದರೆ ಮಾಸ್ಕ್ ಧರಿಸದ ಬಡವರನ್ನು ಅವರು ಶಿಕ್ಷಿಸುತ್ತಾರೆ,'' ಎಂದು ಕಾಂಗ್ರೆಸ್ ವಕ್ತಾರೆ ಗರೀಮ ದಸೌನಿ ಟ್ವೀಟ್ ಮಾಡಿದ್ದಾರಲ್ಲದೆ ಕೋವಿಡ್ ಎರಡನೇ ಅಲೆಯಲ್ಲಿ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡಿರುವಾಗ ಈ ಸಚಿವರು ಯಾವ ರೀತಿಯ ಸಂದೇಶ ನೀಡುತ್ತಿದ್ದಾರೆ? ಎಂದು ಅವರು ಪ್ರಶ್ನಿಸಿದ್ದಾರೆ.

"ಮಾಸ್ಕ್ ಧರಿಸುವ ಸರಿಯಾದ ವಿಧಾನ ಇಲ್ಲಿದೆ,'' ಎಂದು ಬರೆದು ಇನ್ನೊಬ್ಬ ಕಾಂಗ್ರೆಸ್ ನಾಯಕ ಪಂಕಜ್ ಪುನಿಯಾ ಸಚಿವರನ್ನು ವ್ಯಂಗ್ಯವಾಡಿದ್ದಾರೆ.

ಸಚಿವರು ತಮ್ಮ ಕೃತ್ಯಕ್ಕೆ ಕ್ಷಮೆಯಾಚಿಸಬೇಕೆಂದು ಆಪ್ ವಕ್ತಾರ ಅಮರ್‍ಜಿತ್ ಸಿಂಗ್ ರಾವತ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News