ಜಮ್ಮು ವಾಯುನೆಲೆ ಸಮೀಪ ಮತ್ತೊಂದು ಡ್ರೋನ್ ಪತ್ತೆ

Update: 2021-07-21 04:49 GMT

ಹೊಸದಿಲ್ಲಿ: ಜಮ್ಮುವಿನ ವಾಯುಪಡೆ ನಿಲ್ದಾಣದಲ್ಲಿ ಡ್ರೋನ್ ದಾಳಿ ನಡೆದ  ವಾರಗಳ ನಂತರ ಬುಧವಾರ ಮುಂಜಾನೆ ವಾಯುನೆಲೆಯ ಬಳಿ ಮತ್ತೊಂದು ಡ್ರೋನ್ ಚಲಿಸುತ್ತಿರುವುದು ಪತ್ತೆಯಾಗಿದೆ ಎಂದು India Today ವರದಿ ಮಾಡಿದೆ.

ಬುಧವಾರ ಮುಂಜಾನೆ 4.05 ರ ಸುಮಾರಿಗೆ ವಾಯುನೆಲೆಯಿಂದ ಕೆಲವು ನೂರು ಮೀಟರ್ ದೂರದಲ್ಲಿರುವ ಸತ್ವಾರಿಯ ಜಮ್ಮು ವಾಯುನೆಲೆಯ ಬಳಿ ಡ್ರೋನ್ ಪತ್ತೆಯಾಗಿದೆ.

ಜಮ್ಮು ವಿಮಾನ ನಿಲ್ದಾಣದಲ್ಲಿರುವ ಭಾರತೀಯ ವಾಯುಪಡೆ (ಐಎಎಫ್) ನಿಲ್ದಾಣದಲ್ಲಿ ಸ್ಫೋಟಕಗಳನ್ನು ಎಸೆಯಲು ಜೂನ್ 27 ರಂದು ಡ್ರೋನ್‌ಗಳನ್ನು ಬಳಸಲಾಗಿದ್ದು, ಅದರ ಇಬ್ಬರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.

ಜೂನ್ 29 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಡ್ರೋನ್‌ಗಳು ಸೇರಿದಂತೆ ಹೊಸ ಭದ್ರತಾ ಬೆದರಿಕೆಗಳ ಬಗ್ಗೆ ಚರ್ಚಿಸಲು ಉನ್ನತ ಮಟ್ಟದ ಸಭೆ ನಡೆಸಿದ್ದರು.

 ಭಯೋತ್ಪಾದಕ ಗುಂಪುಗಳಿಂದ ಭದ್ರತಾ ಬೆದರಿಕೆಗಳಿಗೆ ಡ್ರೋನ್‌ಗಳು ಹೊಸ ಆಯಾಮವನ್ನು ನೀಡಿವೆ ಎಂದು ಮಂಗಳವಾರ ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News