ದತ್ತಾಂಶ ಪರಿಷ್ಕರಿಸಿದ ಮಹಾರಾಷ್ಟ್ರ:ದೇಶದಲ್ಲಿ ದೈನಂದಿನ ಕೋವಿಡ್ ಸಾವಿನ ಸಂಖ್ಯೆಯಲ್ಲಿ ದಿಢೀರ್ ಏರಿಕೆ

Update: 2021-07-21 07:19 GMT

 ಹೊಸದಿಲ್ಲಿ:  ಭಾರತವು ಕಳೆದ 24 ಗಂಟೆಗಳಲ್ಲಿ 42,015 ಹೊಸ ಕೋವಿಡ್ ಪ್ರಕರಣಗಳನ್ನು ವರದಿ ಮಾಡಿದೆ. ಇದು ಮಂಗಳವಾರ(30,000  ಪ್ರಕರಣ)ವರದಿ ಯಾಗಿದ್ದಕ್ಕಿಂತ ಹೆಚ್ಚಾಗಿದೆ. ಇದೀಗ ಒಟ್ಟು ಸೋಂಕುಗಳ ಸಂಖ್ಯೆ 3.12 ಕೋಟಿಗೆ ತಲುಪಿದೆ. ಮಂಗಳವಾರ ತಡರಾತ್ರಿ ಮಹಾರಾಷ್ಟ್ರವು ತನ್ನ ದತ್ತಾಂಶವನ್ನು ಪರಿಷ್ಕರಿಸಿದ ನಂತರ 3,998 ಸಾವುಗಳು ವರದಿಯಾಗಿವೆ.  ಇದು ಜೂನ್ 12ರ ಬಳಿಕ ಗರಿಷ್ಟ ದೈನಂದಿನ ಸಾವಿನ ಸಂಖ್ಯೆಯಾಗಿದೆ.

14 ನೇ ಬಾರಿಗೆ ತನ್ನ ಡೇಟಾವನ್ನು ಪರಿಷ್ಕರಿಸಿದ ನಂತರ ಮಹಾರಾಷ್ಟ್ರವು 3,509 ಕೋವಿಡ್ ಸಾವುಗಳನ್ನು ಸೇರಿಸಿದೆ. ಇದು ಇಂದು ಒಟ್ಟು ಸಾವುನೋವುಗಳಲ್ಲಿ ಭಾರಿ ಏರಿಕೆಗೆ ಕಾರಣವಾಗಿದೆ. 489 ಹೊಸ ಸಾವುಗಳು ದೇಶದ ಉಳಿದ ಭಾಗದಿಂದ ವರದಿಯಾಗಿದ್ದು, ಒಟ್ಟು ಸಾವುಗಳ ಸಂಖ್ಯೆ 3,998 ಕ್ಕೆ ತಲುಪಿದೆ. ಸಾಂಕ್ರಾಮಿಕ ರೋಗದ ಪ್ರಾರಂಭದಿಂದ ಒಟ್ಟು ಸಾವುಗಳು 4.18 ಲಕ್ಷ ದಾಟಿದೆ.

ಸಕ್ರಿಯ ಕೋವಿಡ್ ಪ್ರಕರಣಗಳು ಭಾರತದಲ್ಲಿ 4.07 ಲಕ್ಷಕ್ಕೆ ಇಳಿದಿದೆ. ಸೋಂಕುಗಳು ಪ್ರತಿದಿನ ಕಡಿಮೆಯಾಗುತ್ತಿವೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ ಶೇಕಡಾ 1.30 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 36,977 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದುವರೆಗಿನ ಒಟ್ಟು ಚೇತರಿಕೆ 3.04 ಕೋಟಿಗೂ ಅಧಿಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News