ಪಂಜಾಬ್‌ ಮುಖ್ಯಮಂತ್ರಿಯೊಂದಿಗೆ ಸಿಧು ಯಾಕೆ ಕ್ಷಮೆ ಯಾಚಿಸಬೇಕು?: ಬೆಂಬಲಿಗ ಶಾಸಕರ ಪ್ರಶ್ನೆ

Update: 2021-07-21 08:00 GMT

ಅಮೃತಸರ: ಪಂಜಾಬ್ ಕಾಂಗ್ರೆಸ್  ಘಟಕಕ್ಕೆ ಹೊಸದಾಗಿ ನೇಮಕಗೊಂಡಿರುವ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಅಮೃತಸರ ನಿವಾಸದಲ್ಲಿ ಇಂದು ನೆರೆದಿದ್ದ ಬೆಂಬಲಿಗರಲ್ಲಿ ಹೆಚ್ಚಿನ ಸಂಭ್ರಮವಿತ್ತು. ಪಕ್ಷದ ಶಾಸಕರು ಗೋಲ್ಡನ್ ಟೆಂಪಲ್ ಭೇಟಿಗೆ ಮುಂಚಿತವಾಗಿ ಆಗಮಿಸಿದರು.  ಸಿಧು ಅವರು  ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂಬ ಅಮರಿಂದರ್ ಸಿಂಗ್ ಅವರ ಬಣದ ಬೇಡಿಕೆಯನ್ನು ಸಿಧು ಬೆಂಬಲಿಗರ ಶಾಸಕರೊಬ್ಬರು ತಿರಸ್ಕರಿಸಿದರು.

ಸಿಖ್ಖರ ಪವಿತ್ರ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಸಿಧು ಹಾಗೂ  ಶಾಸಕರು ನಗರದ ಶ್ರೀ ವಾಲ್ಮೀಕಿ ಮಂದಿರ ರಾಮ್ ತಿರಥ್ ​​ಹಾಗೂ  ದುರ್ಗಿಯಾನಾ ಮಂದಿರಗಳನ್ನು ಭೇಟಿ ಮಾಡಲು ಯೋಜಿಸಿದ್ದಾರೆ. ಐಷಾರಾಮಿ ಬಸ್ ವಸತಿ ಆವರಣಕ್ಕೆ ಪ್ರವೇಶಿಸುತ್ತಿರುವುದು ಕಂಡುಬಂತು.

ಈಗಾಗಲೇ 62 ಶಾಸಕರು ಸಿಧು ನಿವಾಸಕ್ಕೆ ಬಂದಿದ್ದಾರೆ.  ಶಾಸಕರೊಂದಿಗೆ ಸಿಧು ಸಭೆ ನಡೆಸಿದ್ದಾರೆ ಎಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರ ತಂಡ ತಿಳಿಸಿದೆ.

"ಸಿಧು ಏಕೆ ಕ್ಷಮೆಯಾಚಿಸಬೇಕು. ಇದು ಸಾರ್ವಜನಿಕ ಸಮಸ್ಯೆಯಲ್ಲ. ಮುಖ್ಯಮಂತ್ರಿ ಅನೇಕ ಸಮಸ್ಯೆಗಳನ್ನು ಬಗೆಹರಿಸಿಲ್ಲ. ಆ ಸಂದರ್ಭದಲ್ಲಿ ಅವರು ಕೂಡ ಸಾರ್ವಜನಿಕರ ಕ್ಷಮೆಯಾಚಿಸಬೇಕು" ಎಂದು ಜಲಂಧರ್ ಕಂಟೋನ್ಮೆಂಟ್‌ನ ಕಾಂಗ್ರೆಸ್ ಶಾಸಕ ಪರಗತ್ ಸಿಂಗ್ ಅವರು ಹೇಳಿದರು.

ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಸಿಧು ಅವರನ್ನು ಭೇಟಿಯಾಗಬೇಕಾದರೆ ಸಿಧು  ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಪಂಜಾಬ್ ಮುಖ್ಯಮಂತ್ರಿಯ ಸಲಹೆಗಾರ ಮಾಡಿರುವ ಟ್ವೀಟ್‌ಗೆ ಶಾಸಕರು ಪ್ರತಿಕ್ರಿಯಿಸಿದ್ದಾರೆ.

ಸಿಧು ಅವರ ಕಾರಣದಿಂದಾಗಿ 2022 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ನಂಬಿಕೆ ನನಗಿದೆ. ಸಿಎಂ ಸಲಹೆಗಾರರು ಅಮರಿಂದರ್  ಅವರನ್ನು ದಾರಿ ತಪ್ಪಿಸುತ್ತಿದ್ದಾರೆ. ಈ ಕಾರಣದಿಂದಾಗಿ, ಪಂಜಾಬ್ ಹಿಂದಕ್ಕೆ ಹೋಗುತ್ತಿದೆ "ಎಂದು ಘಾನೌರ್ ಶಾಸಕ ಮದನ್ ಲಾಲ್ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News