ಮುಂದಿನ ತಿಂಗಳು ಮಕ್ಕಳಿಗೆ ಕೋವಿಡ್ ಲಸಿಕೆ: ಬಿಜೆಪಿ ಸಂಸದರಿಗೆ ಆರೋಗ್ಯ ಸಚಿವರ ಭರವಸೆ

Update: 2021-07-27 08:18 GMT

ಹೊಸದಿಲ್ಲಿ: ಮಕ್ಕಳಿಗೆ ಕೋವಿಡ್ ಲಸಿಕೆಗಳು ಕೆಲವೇ ದಿನಗಳಲ್ಲಿ ಬರಲಿವೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು ಬೆಳಿಗ್ಗೆ ಸಂಸತ್ತಿನಲ್ಲಿ ನಡೆದ ಬಿಜೆಪಿ ಸಂಸದರ ಸಭೆಯಲ್ಲಿ ತಿಳಿಸಲಾಯಿತು.

ಮುಂದಿನ ತಿಂಗಳು ಸರಕಾರವು ಮಕ್ಕಳಿಗೆ ಲಸಿಕೆ ನೀಡಲು ಆರಂಭಿಸುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಬಿಜೆಪಿಯ ಸಂಸದೀಯ ಪಕ್ಷದ ಸಭೆಯಲ್ಲಿ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.

ತಜ್ಞರ ಪ್ರಕಾರ, ಇದು ಪ್ರಸರಣದ ಸರಪಳಿಯನ್ನು ಮುರಿಯುವಲ್ಲಿ ಹಾಗೂ  ಕೋವಿಡ್‌ನ ಮೂರನೇ ಅಲೆಯ ಸಂಭವನೀಯತೆಯ ಎಚ್ಚರಿಕೆಗಳ ನಡುವೆ ದೇಶಾದ್ಯಂತ ಶಾಲೆಗಳನ್ನು ಪುನಃ ತೆರೆಯುವ  ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.

ಸೆಪ್ಟೆಂಬರ್ ವೇಳೆಗೆ 12 ರಿಂದ 18 ವರ್ಷದ ಮಕ್ಕಳಿಗೆ ಝಡಸ್ ಲಸಿಕೆಯೊಂದಿಗೆ ಮಕ್ಕಳಿಗೆ ವ್ಯಾಕ್ಸಿನೇಷನ್ ಪ್ರಾರಂಭವಾಗಲಿದೆ ಎಂದು ಲಸಿಕೆಗಳ ಕುರಿತ ರಾಷ್ಟ್ರೀಯ ತಜ್ಞರ ಗುಂಪಿನ ಮುಖ್ಯಸ್ಥ ಡಾ.ಎನ್.ಕೆ.ಅರೋರಾ ಅವರು ಇತ್ತೀಚೆಗೆ ಎನ್‌ಡಿಟಿವಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News