ಬ್ಯಾನರ್‌ ನಲ್ಲಿ ಒಲಿಂಪಿಕ್ಸ್‌ ಪದಕ ವಿಜೇತೆಯ ಫೋಟೊಗಿಂತ ದೊಡ್ಡದಾದ ಪ್ರಧಾನಿ ಮೋದಿ ಫೋಟೊ : ಟ್ವಿಟರ್‌ ನಲ್ಲಿ ವ್ಯಂಗ್ಯ

Update: 2021-07-27 10:29 GMT
Photo: pib.gov.in/

ಹೊಸದಿಲ್ಲಿ: 2021ರ ಟೋಕಿಯೋ ಒಲಿಂಪಿಕ್ಸ್‌ ನಲ್ಲಿ ಭಾರ ಎತ್ತುವ ಸ್ಫರ್ಧೆಯಲ್ಲಿ ಭಾರತದ ಪರವಾಗಿ ಮೊದಲ ಬೆಳ್ಳಿ ಪದಕ ಗೆದ್ದಿದ್ದ ಮೀರಾಬಾಯಿ ಚಾನು ತಮ್ಮ ಹುಟ್ಟೂರಿಗೆ ಆಗಮಿಸಿದ್ದಾರೆ. ಈ ವೇಳೆ ಕೇಂದ್ರ ಸರಕಾರದ ಪರವಾಗಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿನ ಬ್ಯಾನರ್‌ ಸದ್ಯ ವಿವಾದಕ್ಕೀಡಾಗಿದೆ. 

ಕಾರ್ಯಕ್ರಮದಲ್ಲಿ ಹಿಂಬದಿಯಲ್ಲಿರುವ ಬ್ಯಾನರ್‌ ನಲ್ಲಿ ಮೀರಾಬಾಯಿ ಚಾನುರವರ ಫೋಟೊಗಿಂತ ಪ್ರಧಾನಿ ಮೋದಿಯವರ ಫೋಟೊ ದೊಡ್ಡದಾಗಿ ಪ್ರಕಟಿಸಿದ್ದು, ಪ್ರಧಾನಿ ಮೋದಿ ಕುರಿತು ಟ್ವೀಟ್‌ ಮಾಡಿದ್ದಕ್ಕೆ ಆಜ್‌ ತಕ್‌ ವಾಹಿನಿಯಿಂದ ಅಮಾನತುಗೊಂಡಿರುವ ಪತ್ರಕರ್ತ ಶ್ಯಾಮ್‌ ಮೀರಾ ಸಿಂಗ್‌ ಫೋಟೊವನ್ನು ಟ್ವಿಟರ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

"ಪೋಸ್ಟರ್ ನಲ್ಲಿ ಪದಕ ವಿಜೇತ ಕ್ರೀಡಾಪಟುಗಿಂತ ದೊಡ್ಡ ಜಾಗವನ್ನು ಮೋದಿಯವರ ಗಡ್ಡವೇ ಆಕ್ರಮಿಸಿದೆ. 
ಮೋದೀಜಿ ಪದಕ ತಂದಿದ್ದಾರೆಯೋ, ಮೀರಾ ಬಾಯಿ ತಂದಿದ್ದಾರೆಯೋ ಎಂದು ನನಗೆ ಅರ್ಥವಾಗುತ್ತಿಲ್ಲ. ವಿಜೇತರ ಚಿತ್ರ ಚಿಕ್ಕದಾಗಿಯೂ, ಕ್ರೆಡಿಟ್ ತೆಗೆದುಕೊಳ್ಳುವ ಪರಜೀವಿಯ ಚಿತ್ರ ದೊಡ್ಡದಾಗಿರುವುದನ್ನು ಇದೇ ಮೊದಲ ಬಾರಿ ನೋಡುತ್ತಿದ್ದೇನೆ." ಎಂದು ಶ್ಯಾಮ್‌ ಮೀರಾ ಸಿಂಗ್‌ ಟ್ವೀಟ್‌ ಮಾಡಿದ್ದಾರೆ. 

"ಸಫಲಗೊಂಡ ಎಲ್ಲ ಕ್ಷೇತ್ರಗಳ ಕ್ರೆಡಿಟ್‌ ಮೋದೀಜಿಗೆ ಸಲ್ಲುತ್ತದೆ ಮತ್ತು ಎಲ್ಲಾ ವಿಫಲತೆಯ ಕ್ರೆಡಿಟ್‌ ಗಳು ನೆಹರೂಗೆ ಸಲ್ಲುತ್ತದೆ" ಎಂದು ವ್ಯಕ್ತಿಯೋರ್ವರು ಪ್ರತಿಕ್ರಿಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News