ನಟ ವಿಜಯ್ ಐಶಾರಾಮಿ ಕಾರು ಆಮದು ಪ್ರಕರಣ: ಏಕ ಸದಸ್ಯ ಪೀಠದ ಆದೇಶಕ್ಕೆ ಮದ್ರಾಸ್ ಹೈಕೋರ್ಟ್ ತಡೆ

Update: 2021-07-27 13:14 GMT
photo: facebook 

ಚೆನ್ನೈ: ಐಷಾರಾಮಿ ಕಾರು ಆಮದು ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರಿಯ ನಟ ವಿಜಯ್ ಗೆ 1 ಲಕ್ಷ ರೂ. ದಂಡ ವಿಧಿಸಿರುವ ಹಾಗೂ ಅವರ ವಿರುದ್ದ ಕೆಲವು ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ್ದ ಏಕ ಸದಸ್ಯ ಪೀಠದ ಆದೇಶಕ್ಕೆ ಮದ್ರಾಸ್ ಹೈಕೋರ್ಟ್ ಮಂಗಳವಾರ ಮಧ್ಯಂತರ ತಡೆ ನೀಡಿದೆ.

ನ್ಯಾಯಮೂರ್ತಿಗಳಾದ ಎಂ. ದುರೈ ಸ್ವಾಮಿ ಹಾಗೂ ಆರ್. ಹೇಮಲತಾ ಅವನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಮಧ್ಯಂತರ ತಡೆ ನೀಡಿದೆ. ಆದರೆ 2012ರಲ್ಲಿ ಇಂಗ್ಲೆಂಡ್ ನಿಂದ ರೋಲ್ಸ್ ರಾಯ್ಸ್ ಪೋಸ್ಟ್ ಕಾರನ್ನು ಆಮದು ಮಾಡಿಕೊಳ್ಳಲು ವಿಧಿಸಿದ್ದ ಶೇ.80ರಷ್ಟು ಪ್ರವೇಶ ತೆರಿಗೆಯಲ್ಲಿ ಬಾಕಿ ಇರುವ ಮೊತ್ತವನ್ನು ಪಾವತಿಸುವಂತೆ ವಿಜಯ್ ಅವರಿಗೆ ನಿರ್ದೇಶನ ನೀಡಿದೆ.

ಆಮದು ಮಾಡಿಕೊಂಡಿದ್ದ ಕಾರಿಗೆ ಹೆಚ್ಚು ಪ್ರವೇಶ ತೆರಿಗೆ ವಿಧಿಸಲಾಗಿದೆ ಎಂದು ಆರೋಪಿಸಿ ವಿಜಯ್ ರಿಟ್ ಅರ್ಜಿ ಸಲ್ಲಿಸಿದ್ದರು.

ಕಾರಿಗೆ ವಿಧಿಸಿರುವ ಪ್ರವೇಶ ತೆರಿಗೆಯಿಂದ ವಿನಾಯಿತಿ ನೀಡಬೇಕೆಂದು ಕೋರಿ ಜುಲೈ 13ರಂದು ವಿಜಯ್ ರಿಟ್ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News