9 ಲಕ್ಷ ಮಕ್ಕಳಿಗೆ ತೀವ್ರ ಅಪೌಷ್ಟಿಕತೆ : ಬಹುತೇಕ ಈ ರಾಜ್ಯದವರು...

Update: 2021-07-30 05:19 GMT
ಸಾಂದರ್ಭಿಕ ಚಿಕಿತ್ಸೆ

ಹೊಸದಿಲ್ಲಿ : ದೇಶದಲ್ಲಿ ಆರು ತಿಂಗಳಿಂದ ಆರು ವರ್ಷದ ಒಳಗಿನ ಮಕ್ಕಳ ಪೈಕಿ 9.3 ಲಕ್ಷ ಮಕ್ಕಳು ತೀವ್ರ ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಪೈಕಿ ಉತ್ತರ ಪ್ರದೇಶದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನೀಡಿದ ಉತ್ತರದಲ್ಲಿ ಈ ಅಂಕಿ ಅಂಶ ಸೇರಿದೆ.

"ಐಸಿಡಿಎಸ್-ಆರ್‌ಆರ್‌ಎಸ್ ಪೋರ್ಟೆಲ್ ಪ್ರಕಾರ 2020ರ ನವೆಂಬರ್ 30ಕ್ಕೆ ಇದ್ದಂತೆ ದೇಶದಲ್ಲಿ 9,27,606 ಮಕ್ಕಳು ತೀವ್ರ ಅಪೌಷ್ಟಿಕತೆ ಯಿಂದ ಬಳಲುತ್ತಿದ್ದಾರೆ. ಈ ಪೈಕಿ ಉತ್ತರ ಪ್ರದೇಶದ ಪಾಲು 3,98,359" ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಯಡಿ ತೀವ್ರ ಅಪೌಷ್ಟಿಕ ಮಕ್ಕಳೂ ಸೇರಿದಂತೆ 6 ತಿಂಗಳಿನಿಂದ ಆರು ವರ್ಷದೊಳಗಿನ ಮಕ್ಕಳಿಗೆ ಪೂರಕ ಪೋಷಕಾಂಶಗಳನ್ನು ನೀಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಅಪೌಷ್ಟಿಕತೆಯನ್ನು ಕಡಿಮೆ ಮಾಡುವ ಉದ್ದೇಶದ ಪೋಷಣ ಅಭಿಯಾನದಲ್ಲಿ 2017-17ರಿಂದ 2020-21ರ ವರೆಗೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 5312.7 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಈ ಪೈಕಿ ಮಾರ್ಚ್ 31ರವರೆಗೆ 2985.5 ಕೋಟಿ ರೂಪಾಯಿ ಬಳಕೆಯಾಗಿದೆ. 2020ರ ಒಳಗಾಗಿ ಬೆಳವಣಿಗೆ ಕುಂಠಿತ ಮಕ್ಕಳ ಪ್ರಮಾಣವನ್ನು ಶೇಕಡ 38.4ರಿಂದ ಶೇಕಡ 25ಕ್ಕೆ ಇಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಅಪೌಷ್ಟಿಕತೆ ಕುರಿತ ಮತ್ತೊಂದು ಪ್ರಶ್ನೆಗೆ ನೀಡಿದ ಉತ್ತರದಲ್ಲಿ, "ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-4ರ ಅನ್ವಯ ಮಹಿಳೆಯರಲ್ಲಿ ಅಪೌಷ್ಟಿಕತೆ ಶೇಕಡ 22.9ರಷ್ಟಿದ್ದು, ಪುರುಷರಲ್ಲಿ ಈ ಪ್ರಮಾಣ 20.2% ಆಗಿದೆ. ಎನ್‌ಎಚ್‌ಎಫ್‌ಎಸ್-3 (2005-26) ಸಮೀಕ್ಷೆಯ ಅವಧಿಯಲ್ಲಿ ಇದ್ದ 35.5% ಹಾಗೂ 34.2%ಗೆ ಹೋಲಿಸಿದರೆ ಇದು ಕಡಿಮೆ ಎಂದು ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News