ಅಮೆರಿಕಾದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ರಾಯಭಾರಿಯಾಗಿ ನೇಮಕಗೊಂಡ ಭಾರತೀಯ-ಅಮೆರಿಕನ್ ರಶಾದ್ ಹುಸೈನ್

Update: 2021-07-31 06:40 GMT
Photo: Twitter

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು  ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿ ಭಾರತೀಯ-ಅಮೆರಿಕನ್ ಅಟಾರ್ನಿ ರಶಾದ್ ಹುಸೈನ್ ಅವರನ್ನು ನೇಮಿಸಿದ್ದಾರೆ. ಈ ಪ್ರಮುಖ ಹುದ್ದೆಯನ್ನು ಪಡೆದ ಮುಸ್ಲಿಂ ಸಮುದಾಯದ  

ಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ನಲ್ವತ್ತೊಂದು ವರ್ಷದ ಹುಸೈನ್ ಅವರು ಪ್ರಸ್ತುತ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಪಾಟ್ನರ್ ಶಿಪ್ ಎಂಡ್ ಗ್ಲೋಬಲ್ ಎಂಗೇಜ್ಮೆಂಟ್ ನಿರ್ದೇಶಕರಾಗಿದ್ದಾರೆ.

ಹುಸೈನ್ ಅವರು ಈ ಹಿಂದೆ  ನ್ಯಾಯ ಇಲಾಖೆಯ ರಾಷ್ಟ್ರೀಯ ಭದ್ರತಾ ವಿಭಾಗದ ಹಿರಿಯ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.

ಒಬಾಮ ಆಡಳಿತಾವಧಿಯಲ್ಲಿ ಅವರು ಇಸ್ಲಾಮಿಕ್ ಸಹಕಾರ ಸಂಘಟನೆಯಲ್ಲಿ ಅಮೆರಿಕಾದ ವಿಶೇಷ ರಾಯಭಾರಿಯಾಗಿದ್ದರಲ್ಲದೆ ಸ್ಟ್ರೆಟಜಿಕ್ ಕೌಂಟರ್ ಟೆರರಿಸಂ ಕಮ್ಯುನಿಕೇಶನ್ಸ್ ನ ಅಮೆರಿಕಾದ ವಿಶೇಷ ರಾಯಭಾರಿ ಹಾಗೂ ಶ್ವೇತ ಭವನದ ಡೆಪ್ಯುಟಿ ಅಸೋಸಿಯೇಟ್ ಕೌನ್ಸೆಲ್ ಆಗಿ ಸೇವೆ ಸಲ್ಲಿಸಿದ್ದಾರೆ.

ಇದಕ್ಕೂ ಹಿಂದೆ ಅವರು  ಹೌಸ್ ಜುಡಿಶಿಯರಿ ಕಮಿಟಿಯಲ್ಲಿ ಜುಡಿಶಿಯಲ್ ಲಾ ಕ್ಲರ್ಕ್ ಆಗಿ ಸೇವೆ ಸಲ್ಲಿಸಿದ್ದರು.

ಯೇಲ್ ಲಾ ಸ್ಕೂಲ್‍ನಿಂದ ಜ್ಯೂರಿಸ್ ಡಾಕ್ಟರ್ ಪದವಿ ಪಡೆದಿರುವ ಅವರು ಕೆನಡಿ ಸ್ಕೂಲ್ ಆಫ್ ಗವರ್ನಮೆಂಟ್‍ನಿಂದ  ಸಾರ್ವಜಿನಿಕ ಆಡಳಿತದಲ್ಲಿ ಸ್ನಾತ್ತಕೋತ್ತರ ಪದವಿ ಹಾಗೂ ಹಾರ್ವರ್ಡ್ ವಿವಿಯಿಂದ ಅರೆಬಿಕ್ ಮತ್ತು ಇಸ್ಲಾಮಿಕ್ ಸ್ಟಡೀಸ್‍ನಲ್ಲಿ ಸ್ನಾತ್ತಕೋತ್ತರ ಪದವಿ ಪಡೆದಿದ್ದಾರೆ.

 ಜಾರ್ಜ್‍ಟೌನ್ ಲಾ ಸೆಂಟರಿನಲ್ಲಿ ಹಾಗೂ ಜಾರ್ಜ್‍ಟೌನ್ ಸ್ಕೂಲ್ ಆಫ್ ಫಾರಿನ್ ಸರ್ವಿಸ್‍ನಲ್ಲಿ ಅವರು ಪ್ರೊಫೆಸರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News