ಕೋವಿಡ್-19: ದೇಶದಲ್ಲಿ 41,649 ಹೊಸ ಪ್ರಕರಣಗಳು ವರದಿ, 593 ಜನರ ಸಾವು

Update: 2021-07-31 15:27 GMT

ಹೊಸದಿಲ್ಲಿ, ಜು.31: ಶನಿವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 41,649 ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿದ್ದು,ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 3,16,13,993ಕ್ಕೇರಿದೆ. ಈ ಅವಧಿಯಲ್ಲಿ ಇನ್ನೂ 593 ಜನರು ಸೋಂಕಿಗೆ ಬಲಿಯಾಗಿದ್ದು,ಸಾವುಗಳ ಸಂಖ್ಯೆ4,23,810ಕ್ಕೇರಿದೆ. ಸಕ್ರಿಯ ಪ್ರಕರಣಗಳಲ್ಲಿ 3,765ರಷ್ಟು ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ. ‌

ಸತತ ನಾಲ್ಕನೇ ದಿನವೂ ದೇಶದಲ್ಲಿಯ ಸಕ್ರಿಯ ಕೊರೋನವೈರಸ್ ಪ್ರಕರಣಗಳಲ್ಲಿ ಏರಿಕೆಯಾಗಿದ್ದು, 4,08,920ಕ್ಕೆ ತಲುಪಿದೆ. ಇದು ಒಟ್ಟು ಪ್ರಕರಣಗಳ ಶೇ.1.29ರಷ್ಟಾಗಿದೆ. ಇದೇ ವೇಳೆ ಶೇ.97.37ರಷ್ಟು ರಾಷ್ಟ್ರೀಯ ಕೋವಿಡ್-19 ಚೇತರಿಕೆ ದರ ದಾಖಲಾಗಿದೆ.
ಶುಕ್ರವಾರ ದೇಶದಲ್ಲಿ ಸೋಂಕು ಪತ್ತೆ ಹಚ್ಚಲು 17,76,315 ಪರೀಕ್ಷೆಗಳನ್ನು ನಡೆಸಲಾಗಿದ್ದು,ಈವರೆಗೆ ನಡೆಸಲಾದ ಒಟ್ಟು ಪರೀಕ್ಷೆಗಳ ಸಂಖ್ಯೆ 46,64,27,038ಕ್ಕೇರಿದೆ. ದೈನಂದಿನ ಪಾಸಿಟಿವಿಟಿ ದರ ಶೇ.2.34ರಷ್ಟಿದ್ದು, ಮರಣ ದರವು ಶೇ.1.34ರಷ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News