ಶಾಸಕ ಝಮೀರ್ ಅಹ್ಮದ್ ಮನೆ, ಕಚೇರಿ ಮೇಲೆ ಇ.ಡಿ. ದಾಳಿ

Update: 2021-08-05 17:53 GMT

ಬೆಂಗಳೂರು : ಶಾಸಕ ಝಮೀರ್ ಅಹ್ಮದ್ ಮನೆ, ಕಚೇರಿ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಗುರುವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ. ವಿವಿಧ ತಂಡಗಳಲ್ಲಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸ್ಥಳೀಯ ಪೊಲೀಸ್ ಹಾಗೂ ಸಿಆರ್‌ಪಿಎಫ್‌ ಪಡೆ ಭದ್ರತೆ ಜೊತೆ ಈ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ.

ಇಂದು ಬೆಳಗ್ಗೆ 6 ಗಂಟೆಗೆ ಝಮೀರ್ ಅಹ್ಮದ್ ಅವರ ಕಂಟೋನ್ಮೆಂಟ್ ಬಳಿ ಇರುವ ಮನೆ ಸೇರಿ ಕಚೇರಿ, ಫ್ಲ್ಯಾಟ್ ಹಾಗೂ ನ್ಯಾಷನಲ್ ಟ್ರಾವೆಲ್ಸ್ ಕಚೇರಿಯ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. 

ಝಮೀರ್ ಸಹೋದರ ವಶಕ್ಕೆ? 

ಮಾಜಿ ಸಚಿವ ಝಮೀರ್ ಸಹೋದರ ಮುಝಾಮಿಲ್ ಅಹ್ಮದ್ ಖಾನ್‍ನನ್ನು ಇಡಿ ವಶಕ್ಕೆ ಪಡೆದುಕೊಂಡು, ಇಲ್ಲಿನ ಶಾಂತಿ ನಗರದ ಇಡಿ ಕಚೇರಿಯಲ್ಲಿ ಕೆಲಕಾಲ ವಿಚಾರಣೆ ನಡೆಸಲಾಯಿತು ಎಂದು ತಿಳಿದುಬಂದಿದೆ.

ಪೊಲೀಸ್ ಭದ್ರತೆ

ಮಾಜಿ ಸಚಿವರ ನಿವಾಸ ಮತ್ತು ಕಚೇರಿಗಳ ಮೇಲೆ ಇಡಿ ದಾಳಿ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಇನ್ನು, ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಸಿಆರ್‍ಪಿಎಫ್ ಪೊಲೀಸ್ ಭದ್ರತೆಯೊಂದಿಗೆ ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News