ಇರಾನ್ ವಿರುದ್ಧ ಕ್ರಮಕ್ಕೆ ವಿಶ್ವಸಂಸ್ಥೆಗೆ ಬ್ರಿಟನ್ ಒತ್ತಾಯ

Update: 2021-08-05 14:35 GMT

ಜಿದ್ದಾ (ಸೌದಿ ಅರೇಬಿಯ), ಆ. 5: ಅರಬ್ ಕೊಲ್ಲಿಯಲ್ಲಿ ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಎರಡು ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿರುವುದರಿಂದ ಆ ದೇಶದ ವಿರುಧ್ದ ಕ್ರಮ ತೆಗೆದುಕೊಳ್ಳುವಂತೆ ಬ್ರಿಟನ್ ವಿಶ್ವಸಂಸ್ಥೆಯನ್ನು ಬುಧವಾರ ಒತ್ತಾಯಿಸಿದೆ.

ಇರಾನ್‌ನ ಅಸ್ಥಿರಕಾರಕ ಚಟುವಟಿಕೆಗಳು ಮತ್ತು ಅಂತರ್‌ರಾಷ್ಟ್ರೀಯ ಕಾನೂನಿನ ಉಲ್ಲಂಘನೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪ್ರತಿಕ್ರಿಯಿಸಬೇಕು ಎಂದು ಬ್ರಿಟಿಶ್ ವಿದೇಶ ಕಾರ್ಯದರ್ಶಿ ಡಾಮಿನಿಕ್ ರಾಬ್ ಹೇಳಿದ್ದಾರೆ.

ಪನಾಮ ಧ್ವಜ ಹೊಂದಿದ ಆಸ್ಫಾಲ್ಟ್ ಪ್ರಿನ್ಸೆಸ್ ಹಡಗನ್ನು ಯುಎಇ ಕರಾವಳಿಯ ಸಮುದ್ರದಲ್ಲಿ ಇತ್ತೀಚೆಗೆ ಅಪಹರಿಸಲಾಗಿತ್ತು. ಅಪಹರಣಕಾರರು ಹಡಗನ್ನು ತೊರೆದ ಬಳಿಕ ಹಡಗು ಒಮಾನ್‌ನ ಸೊಹಾರ್ ಬಂದರಿನತ್ತ ಚಲಿಸುತ್ತಿದೆ. ಈ ಹಿನ್ನೆಲೆಯಲ್ಲಿ ಡಾಮಿನಿಕ್ ರಾಬ್ ಈ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News