ವಿದ್ಯುತ್ ತಿದ್ದುಪಡಿ ಮಸೂದೆಯು ದೇಶದ ಹಿತಾಸಕ್ತಿಯನ್ನು ಹೊಂದಿಲ್ಲ: ಸಂಜಯ್ ರಾವತ್

Update: 2021-08-08 18:16 GMT

ಮುಂಬೈ, ಆ. 8: ಕೇಂದ್ರ ಸರಕಾರದ ವಿದ್ಯುತ್ (ತಿದ್ದುಪಡಿ) ಮಸೂದೆ ದೇಶದ ಹಿತಾಸಕ್ತಿಗೆ ಸಂಬಂಧಿಸಿಲ್ಲ ಹಾಗೂ ಅದರ ನಿಯಮಗಳ ಬಗ್ಗೆ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿಲ್ಲ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ರವಿವಾರ ಪ್ರತಿಪಾದಿಸಿದ್ದಾರೆ.

ವಿದ್ಯುತ್ (ತಿದ್ದುಪಡಿ) ಮಸೂದೆಯ ನಿಯಮದ ಪ್ರಕಾರ ಟೆಲಿಕಾಂ ಸೇವೆಯಂತೆ ವಿವಿಧ ಸೇವಾದಾರರಿಂದ ವಿದ್ಯುತ್ ಅನ್ನು ಪಡೆದುಕೊಳ್ಳಲು ಅವಕಾಶ ಇರುತ್ತದೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ಈ ಮಸೂದೆ ಮಂಜೂರಾದರೆ ರಾಜ್ಯ ವಿದ್ಯುತ್ ಕಂಪೆನಿಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ ಎಂದಿದ್ದಾರೆ.

ಮಸೂದೆಯ ನಿಯಮಗಳು ರಾಜ್ಯ ವಿದ್ಯುತ್ ಕಂಪೆನಿಗಳಿಗೆ ಎಚ್ಚರಿಕೆಯ ಗಂಟೆ ಬಾರಿಸಿದೆ. ಈ ಸಂಬಂಧ ನಮ್ಮ ಪಕ್ಷ ಸಮಾಲೋಚನೆ ನಡೆಸಲಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News