ಅಸ್ಸಾಂ: ಸರಕಾರಿ ಶಾಲೆ ಸ್ಫೋಟಗೈದ ದುಷ್ಕರ್ಮಿಗಳು

Update: 2021-08-14 19:00 GMT

ಗುವಾಹಟಿ: ಅಸ್ಸಾಂನ ಹೈಲಕಂಡಿ ಜೆಲ್ಲೆಯಯಲ್ಲಿ ಇರುವ ಅಸ್ಸಾಂ ಸರಕಾರಿ ಶಾಲೆಯನ್ನು ದುಷ್ಕರ್ಮಿಗಳು ಶುಕ್ರವಾರ ಸ್ಫೋಟಕ ಇರಿಸಿ ಸ್ಫೋಟಿಸಿದ್ದಾರೆ.

ಪರಿಸ್ಥಿತಿ ಅವಲೋಕಿಸಲು ಜಿಲ್ಲಾ ಪೊಲೀಸ್ನ ಹಾಗೂ ನಾಗರಿಕ ಆಡಳಿತದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘‘ಈ ಘಟನೆ ಶುಕ್ರವಾರ ರಾತ್ರಿ 11ರಿಂದ 11.30ರ ನಡುವೆ ಸಂಭವಿಸಿದೆ. ಸ್ಫೋಟದಿಂದ ಶಾಲೆಯ ಗೋಡೆಗೆ ಭಾಗಶಃ ಹಾನಿ ಉಂಟಾಗಿದೆ’’ ಎಂದು ಹೈಲಕಂಡಿ ಎಸ್.ಪಿ. ಗೌರವ್ ಉಪಾಧ್ಯಾಯ ಅವರು ಹೇಳಿದ್ದಾರೆ.

ನಮ್ಮ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಪ್ರಮುಖ ಸೊತ್ತುಗಳಿಗೆ ಹಾನಿ ಉಂಟಾಗಿಲ್ಲ. ಆದರೂ ನಾವು ಈ ಬಗ್ಗೆ ಗಂಭೀರ ತನಿಖೆ ನಡೆಸಲಿದ್ದೇವೆ ಎಂದು ಉಪಾಧ್ಯಾಯ ತಿಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News