ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇಮಕಾತಿ ಬಗ್ಗೆ ವರದಿಗೆ ಮುಖ್ಯ ನ್ಯಾಯಮೂರ್ತಿ ರಮಣ ತೀವ್ರ ಅಸಮಾಧಾನ

Update: 2021-08-18 09:35 GMT

ಹೊಸದಿಲ್ಲಿ: ಹೊಸ ನ್ಯಾಯಾಧೀಶರ ನೇಮಕಾತಿಯ ಕುರಿತು ಸುಪ್ರೀಂ ಕೋರ್ಟ್ ಕೊಲಿಜಿಯಂನ ಶಿಫಾರಸುಗಳ ಬಗ್ಗೆ ಮಾಧ್ಯಮ ವರದಿಗಳ ಕುರಿತಾಗಿ ತೀವ್ರ ಅಸಮಾಧಾನಗೊಂಡಿದ್ದೇನೆ ಹಾಗೂ ಅಂತಹ ಸುದ್ದಿಗಳನ್ನು ವರದಿ ಮಾಡುವಲ್ಲಿ ಮಾಧ್ಯಮಗಳು ‘ಜವಾಬ್ದಾರರಾಗಿರಬೇಕು’ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರು ಬುಧವಾರ ಹೇಳಿದರು.

ಯಾವುದೇ ಔಪಚಾರಿಕ ಘೋಷಣೆಗೆ ಮುಂಚೆಯೇ ನೇಮಕಾತಿಗಳ ಕುರಿತ ವರದಿಗಳು ಅದರ ಮೂಲ ಉದ್ದೇಶವನ್ನು ವಿಫಲಗೊಳಿಸಬಹುದು ಎಂದು ಮುಖ್ಯ  ನ್ಯಾಯಾಧೀಶರು ಹೇಳಿದರು.

"ನ್ಯಾಯಾಧೀಶರ ನೇಮಕಾತಿಯ ಪ್ರಕ್ರಿಯೆಯು ಪವಿತ್ರವಾದುದು ಹಾಗೂ ಅದಕ್ಕೆ ಕೆಲವು ಘನತೆ ಇದೆ. ಮಾಧ್ಯಮದ ಸ್ನೇಹಿತರು ಈ ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ಅರ್ಥಮಾಡಿಕೊಳ್ಳಬೇಕು ಹಾಗೂ ಗುರುತಿಸಬೇಕು" ಎಂದು  ನ್ಯಾಯಮೂರ್ತಿ ನವೀನ್ ಸಿನ್ಹಾ ಅವರ ವಿದಾಯ ಕಾರ್ಯಕ್ರಮದಲ್ಲಿ ರಮಣ ಹೇಳಿದರು.

ಸುಪ್ರೀಂ ಕೋರ್ಟ್ ಮಾಧ್ಯಮ ಸ್ವಾತಂತ್ರ್ಯ ಹಾಗೂ  ವ್ಯಕ್ತಿಗಳ ಹಕ್ಕುಗಳನ್ನು ಗೌರವಿಸುತ್ತದೆ ಎಂದು ಪ್ರತಿಪಾದಿಸಿದ ನ್ಯಾಯಮೂರ್ತಿ ರಮಣ, ಎಲ್ಲಾ ಪಾಲುದಾರರು ಈ ಸಂಸ್ಥೆಯ ಸಮಗ್ರತೆ ಹಾಗೂ  ಘನತೆಯನ್ನು ಎತ್ತಿಹಿಡಿಯುತ್ತಾರೆ ಎಂದು ನಿರೀಕ್ಷಿಸಿದ್ದೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News