ಮಾನವೀಯ ನೆಲೆಯಲ್ಲಿ ಅಶ್ರಫ್ ಘನಿಗೆ ಸ್ವಾಗತ: ಯುಎಇ

Update: 2021-08-18 17:03 GMT
photo: twitter

ಹೊಸದಿಲ್ಲಿ: ತಾಲಿಬಾನ್ ಪಡೆ ಅಫ್ಘಾನಿಸ್ತಾನ ಸ್ವಾಧೀನಪಡಿಸಿಕೊಂಡ ಬೆನ್ನಿಗೇ ದೇಶ ಬಿಟ್ಟು ಪಲಾಯನ ಮಾಡಿರುವ  ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿಗೆ "ಮಾನವೀಯತೆಯ ಆಧಾರದ ಮೇಲೆ" ಆತಿಥ್ಯ ನೀಡಲಾಗುತ್ತಿದೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ ಬುಧವಾರ ಹೇಳಿದೆ.

"ಅಫ್ಘಾನ್ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಹಾಗೂ  ಅವರ ಕುಟುಂಬವನ್ನು ಮಾನವೀಯ ನೆಲೆಯಲ್ಲಿ ದೇಶಕ್ಕೆ ಸ್ವಾಗತಿಸಲಾಗಿದೆ ಎಂದು ಯುಎಇ ವಿದೇಶಾಂಗ ವ್ಯವಹಾರಗಳು ಹಾಗೂ  ಅಂತಾರಾಷ್ಟ್ರೀಯ ಸಹಕಾರ ಸಚಿವಾಲಯವು ದೃಢಪಡಿಸಬಹುದು" ಎಂದು ಸಚಿವಾಲಯವು ಸಂಕ್ಷಿಪ್ತ ಹೇಳಿಕೆಯೊಂದರಲ್ಲಿ ತಿಳಿಸಿದೆ.

"ತಾಲಿಬಾನ್‌ಗಳು ಗೆದ್ದಿದ್ದಾರೆ" ಹಾಗೂ  "ರಕ್ತಪಾತದ ಪ್ರವಾಹ" ವನ್ನು ತಪ್ಪಿಸಲು ದೇಶ ಬಿಟ್ಟು ಬಂದಿದ್ದೇನೆ ಎಂದು ರವಿವಾರ ಅಫ್ಘಾನಿಸ್ತಾನವನ್ನು ತೊರೆದಿರುವ ಘನಿ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News