ಇಬ್ಬರು ರಶ್ಯನ್ ಮಹಿಳೆಯರ ಮೃತದೇಹ ಪತ್ತೆ: ಮರಣೋತ್ತರ ಪರೀಕ್ಷೆಗೆ ರಶ್ಯಾ ರಾಯಭಾರಿಯ ಅನುಮತಿಗೆ ಕಾಯುತ್ತಿರುವ ಪೊಲೀಸರು

Update: 2021-08-22 19:04 GMT

ಪಣಜಿ, ಆ. 22: ಎರಡು ಪ್ರತ್ಯೇಕ ಘಟನೆಗಳಲ್ಲಿ ಅಪಾರ್ಟ್ಮೆಂಟ್ ಗಳಲ್ಲಿ ಪತ್ತೆಯಾದ ರಶ್ಯಾದ ಇಬ್ಬರು ಮಹಿಳೆಯರ ಮೃತಹೇಹದ ಮರಣೋತ್ತರ ಪರೀಕ್ಷೆಗೆ ಗೋವಾ ಪೊಲೀಸರು ರಶ್ಯನ್ ರಾಯಬಾರಿ ಕಚೇರಿಯ ಅನುಮತಿಗೆ ಕಾಯುತ್ತಿದ್ದಾರೆ.

 24ರ ಹರೆಯದ ಅಲೆಕ್ಸಾಂಡರ್ ರಿ-ಜೇವಿ ಅವರ ಮೃತಹೇಹ ಉತ್ತರ ಗೋವಾದ ಸಿಯೋಲಿಮ್ನ ಆಕ್ಸೆಲ್ನಲ್ಲಿರುವ ಬಾಡಿಗೆ ಅಪಾರ್ಟ್ಮೆಂಟ್ ನಲ್ಲಿ ಗುರುವಾರ ಸಂಜೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಜೇವಿ ಮಾಡೆಲ್. ಅವರು ತಮಿಳು ಚಿತ್ರದ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಜೇವಿ ಅಪಾರ್ಟ್ಮೆಂಟ್ ನಲ್ಲಿ ಸುಸೈಡ್ ನೋಟ್ ಪತ್ತೆಯಾಗಿತ್ತು. ಆದುದರಿಂದ ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಕೊಲೆ ಅಲ್ಲವೆಂದು ಕಾಣುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು.

ಇನ್ನೊಂದು ಪ್ರಕರಣದಲ್ಲಿ ರಶ್ಯನ್ ಮಹಿಳೆ ಏಕಟೇರಿನಾ ಟಿಟೋವಾ (34) ಮೃತದೇಹ ಅವರ ಅಪಾರ್ಟ್ಮೆಂಟ್ ನಲ್ಲಿ ಗುರುವಾರ ಸಂಜೆ ಪತ್ತೆಯಾಗಿತ್ತು. ಆಕೆಯ ದೇಹದಲ್ಲಿ ಗಾಯಗಳ ಗುರುತು ಇತ್ತು.

 ಎರಡೂ ಮೃತದೇಹಗಳನ್ನು ಬಂಬೋಲಿನ್ನಲ್ಲಿರುವ ಗೋವಾ ವೈದ್ಯಕೀಯ ಕಾಲೇಜಿನಲ್ಲಿ ಸಂರಕ್ಷಿಸಿ ಇರಿಸಲಾಗಿದ್ದು, ರಶ್ಯಾ ರಾಯಭಾರಿ ಕಚೇರಿಯ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News