ಕೃಷಿ ಕಾಯ್ದೆಗಳಿಂದ ಬಿಜೆಪಿಯ ಕೋಟ್ಯಾಧೀಶ ಸ್ನೇಹಿತರಿಗೆ ಲಾಭ: ಪ್ರಿಯಾಂಕಾ ಗಾಂಧಿ

Update: 2021-08-28 16:54 GMT

ಹೊಸದಿಲ್ಲಿ.ಆ.28: ಬಿಜೆಪಿಯ ಕೋಟ್ಯಾಧೀಶ ಸ್ನೇಹಿತರಿಗೆ ಲಾಭವನ್ನುಂಟು ಮಾಡಲು ಮೂರು ಕೃಷಿ ಕಾಯ್ದೆಗಳನ್ನು ರೂಪಿಸಲಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶನಿವಾರ ಆರೋಪಿಸಿದ್ದಾರೆ.

 
ಅದಾನಿ ಸಮೂಹವು ಹಿಮಾಚಲ ಪ್ರದೇಶದಲ್ಲಿ ಸೇಬು ಖರೀದಿ ದರವನ್ನು 16 ರೂ.ಗಳಷ್ಟು ತಗ್ಗಿಸಿದೆ ಮತ್ತು ಇದು ಮಾರುಕಟ್ಟೆಯಲ್ಲಿ ಸಂಕಷ್ಟಕ್ಕೆ ಕಾರಣವಾಗಿದೆ ಎಂಬ ವರದಿಯೊಂದನ್ನು ಉಲ್ಲೇಖಿಸಿರುವ ಅವರು,ರೈತರ ಉತ್ಪನ್ನಗಳ ಬೆಲೆಗಳನ್ನು ನಿರ್ಧರಿಸುವ ಹಕ್ಕನ್ನು ಆಡಳಿತ ಪಕ್ಷದ ಕೋಟ್ಯಾಧೀಶ ಸ್ನೇಹಿತರಿಗೆ ನೀಡಿದರೆ ಇದೇ ಆಗುತ್ತದೆ ಎಂದು ಆರೋಪಿಸಿ ಟ್ವೀಟಿಸಿದ್ದಾರೆ. ಇದೇ ಕಾರಣದಿಂದ ರೈತರು ಮೂರು ‘ಕರಾಳ ’ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಿದ್ದಾರೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News